ರೈತರ ಒತ್ತಾಯಗಳು

7

ರೈತರ ಒತ್ತಾಯಗಳು

Published:
Updated:
ರೈತರ ಒತ್ತಾಯಗಳು

ದೇಶೀ ರೇಷ್ಮೆ ಉತ್ಪಾದಕರನ್ನು (ರೈತರು, ರೀಲರ್‌ಗಳು) ರಕ್ಷಿಸಲು 1,000 ಕೋಟಿ ರೂಪಾಯಿಯ ಆವರ್ತ ನಿಧಿ ಸ್ಥಾಪಿಸಬೆಕು.ರೇಷ್ಮೆ ಆಮದು ಸುಂಕವನ್ನು ಶೇ 30ಕ್ಕೆ ಹೆಚ್ಚಿಸಬೇಕು. ನೇಪಾಳ- ಬಾಂಗ್ಲಾ, ಪಾಕಿಸ್ತಾನದ ಗಡಿಭಾಗದಿಂದ ಕಳ್ಳಮಾರ್ಗದಲ್ಲಿ ನುಸುಳಿ ಬರುತ್ತಿರುವ ರೇಷ್ಮೆಯನ್ನು ತಡೆಯಬೇಕು.ಗ್ರೇಡ್ ಆಧರಿಸಿ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು.ಮಿಶ್ರತಳಿ ಬಿಚ್ಚಾಣಿಕೆ ಸ್ವಯಂ ಚಾಲಿತ ತಂತ್ರಜ್ಞಾನದ ಆವಿಷ್ಕಾರ ಆಗಬೇಕು. ಕೆಎಸ್‌ಎಂಬಿಯನ್ನು ಚುರುಕುಗೊಳಿಸಬೇಕು.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತ್ಯೇಕವಾಗಿ ಸರ್ಕಾರಿ ಸ್ವಾಮ್ಯದಲ್ಲಿ ಫಿಲೇಚರ್‌ಗಳನ್ನು ಸ್ಥಾಪಿಸಬೇಕು. ರೇಷ್ಮೆ ಬ್ಯಾಂಕ್ ಮತ್ತು ರೇಷ್ಮೆ ವಿಚಕ್ಷಣ ದಳ ಜಾರಿಯಾಗಬೇಕು.ಮಾರುಕಟ್ಟೆಯಲ್ಲಿ ಪಾರದರ್ಶಕತೆ ಇರಬೇಕು. ಕೇಂದ್ರ ರೇಷ್ಮೆ ಕಾಯ್ದೆ ತಿದ್ದುಪಡಿ 2006ರ ಲೋಪಗಳನ್ನು ಸರಿಪಡಿಸಬೇಕು.ಕೆ.ಜಿಗೆ ರೂ 341 ವೆಚ್ಚ

ನೀರಾವರಿ ತೋಟದಲ್ಲಿ ಎಕರೆ ಭೂಮಿಯಲ್ಲಿ ಉತ್ತಮ ರೇಷ್ಮೆ ಗೂಡು ಬೆಳೆಯಲು 27,500 (ಒಂದು ಬೆಳೆಗೆ) ರೂಪಾಯಿ ಉತ್ಪಾದನಾ ವೆಚ್ಚ ತಗಲುತ್ತದೆ. ಅಂದರೆ ವಿ-1 ತಳಿಯಲ್ಲಿ ಎಕರೆಗೆ 80 ಕೆ.ಜಿ ಗೂಡು ಬೆಳೆಯಬಹುದಾಗಿದ್ದು, ಉತ್ಪಾದನಾ ವೆಚ್ಚ ಕೆ.ಜಿ ಗೂಡಿಗೆ ರೂ 341 ಆಗಲಿದೆ.ಕೃಷಿಕನ ಭೂಮಿಯ ವೆಚ್ಚ, ನೀರಾವರಿ, ಪಂಪ್‌ಸೆಟ್, ವಾರ್ಷಿಕ ಮೋಟರ್ ದುರಸ್ತಿ ಖರ್ಚು, ತೋಟದಲ್ಲಿ ಕಡ್ಡಿ ಕಟಾವು ಮಾಡಲು, ತೋಟದ ಉಳುಮೆ, ಗೊಬ್ಬರ, ಔಷಧಿ ಖರ್ಚು ಮತ್ತು ಸಿಂಪಡಣೆ, ಹುಳು ಸಾಕುವ ಮನೆ ನಿರ್ಮಾಣ ಮತ್ತು ಅಲ್ಲಿ ನಿಗದಿ ವಾತಾವರಣ ನಿರ್ಮಿಸಲು ತಗಲುವ ವೆಚ್ಚ, ವಿದ್ಯುತ್ ಶುಲ್ಕ, ಮೊಟ್ಟೆ ಬೆಲೆ, ಚಾಕಿ ಬೆಳವಣಿಗೆಯ 10 ದಿನ ಆಳಿಗೆ ತಗಲುವ ಕೂಲಿ, ರೇಷ್ಮೆ ಹುಳು ಸಾಕಾಣಿಕೆಯ 15 ದಿನ ತಗಲುವ ಆಳಿನ ಕೂಲಿ, ಹಣ್ಣು ಹುಳು ಹಾಯಿಸುವುದು, ಚಂದ್ರಿಕೆ ತೆಗೆದು ಗೂಡು ಬಿಡಿಸುವುದು ಹಾಗೂ ಜೂಟು ಬಿಡಿಸುವುದು ಮತ್ತು ಈ ಕಾರ್ಯ ಮಾಡುವ ಆಳಿನ ಕೂಲಿ, ಕಸ ತೆಗೆಯಲು, ಗೂಡುಗಳನ್ನು ಮಾರುಕಟ್ಟೆಗೆ ಸಾಗಿಸಲು, ನ್ಯೂಸ್ ಪೇಪರ್-ಮೇಣದ ಪೇಪರ್, ಚಂದ್ರಿಕೆ ಸ್ವಚ್ಛಗೊಳಿಸುವುದು ಮತ್ತು ಮನೆ ತೊಳೆಯುವುದು, ಇತರೆ ಖರ್ಚು ವೆಚ್ಚಗಳು ಸೇರಿ ಒಂದು ಬೆಳೆಗೆ ಅಂದಾಜು 27,500 ರೂಪಾಯಿ ಖರ್ಚು ಬರುತ್ತದೆ. ಹಾಗಾಗಿ ಕೆ.ಜಿ ರೇಷ್ಮೆ ಗೂಡಿಗೆ 350 ರೂಪಾಯಿಗಿಂತ ಹೆಚ್ಚು ಬೆಲೆ ನಿಗಿದಿಯಾದರೆ ಮಾತ್ರ ರೈತರಿಗೆ ರೇಷ್ಮೆ ಕೃಷಿ ಲಾಭದಾಯಕ. 

ಉತ್ಪಾದನಾ ಪ್ರಮಾಣ

ದೇಶದಲ್ಲಿ ಒಟ್ಟು ರೇಷ್ಮೆ ಉತ್ಪಾದನೆ ಸುಮಾರು 11,000 ಟನ್ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯದ ಪಾಲು 7,000 ಟನ್4ರಾಜ್ಯದಲ್ಲಿ 1997-98ರಲ್ಲಿ ಉತ್ಪತ್ತಿಯಾದ ರೇಷ್ಮೆಗೂಡಿನ ಪ್ರಮಾಣ- 80,000 ಟನ್ರಾಜ್ಯದಲ್ಲಿ 2010-11ರಲ್ಲಿ ಉತ್ಪತ್ತಿಯಾದ ರೇಷ್ಮೆಗೂಡಿನ ಪ್ರಮಾಣ- 53,000 ಟನ್1994-95ರಲ್ಲಿ ಆಮದು ಮಾಡಿಕೊಂಡ ರೇಷ್ಮೆ ಪ್ರಮಾಣ- 4,000 ಟನ್2009-10ರಲ್ಲಿ ಆಮದು ಮಾಡಿಕೊಂಡ ರೇಷ್ಮೆ ಪ್ರಮಾಣ- 8,400 ಟನ್ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry