`ರೈತರ ಕಷ್ಟಕ್ಕೆ ಸರ್ಕಾರ ಕಾರಣ'

ಗುರುವಾರ , ಜೂಲೈ 18, 2019
22 °C

`ರೈತರ ಕಷ್ಟಕ್ಕೆ ಸರ್ಕಾರ ಕಾರಣ'

Published:
Updated:

ಬೆಂಗಳೂರು: `ಸರ್ಕಾರ ಅನುಸರಿಸುತ್ತಿರುವ ಅವೈಜ್ಞಾನಿಕ ನೀತಿಗಳಿಂದ ರೈತರು ಇಂದು ಸಂಕಷ್ಟವನ್ನು ಎದುರಿಸುತ್ತಿದ್ದಾರೆ' ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಅಭಿಪ್ರಾಯಪಟ್ಟರು.ಮಂಡ್ಯದ ಕರ್ನಾಟಕ ಸಂಘವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೈ.ಕೆ.ರಾಮಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ರೈತರು ಹೆಚ್ಚಿನ ಶ್ರಮವಹಿಸಿ ತರಕಾರಿ ಬೆಳೆಯುತ್ತಾರೆ. ಆದರೆ ಬೆಳೆದ ತರಕಾರಿಗೆ ಉತ್ತಮವಾದ ಬೆಲೆಸಿಗದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಅನುಸರಿಸುತ್ತಿರುವ ಅವೈಜ್ಞಾನಿಕ ನೀತಿಗಳೇ ಕಾರಣ' ಎಂದು ಹೇಳಿದರು.`ಮಾಜಿ ಸಚಿವ ವೈ.ಕೆ.ರಾಮಯ್ಯ ಅವರು ಸದಾ ರೈತರ ಪರವಾಗಿ ಕೆಲಸಮಾಡಿದ್ದರು, ತಮ್ಮ ಇಡೀ ಜೀವನವನ್ನು ರೈತರಿಗಾಗಿ ಮುಡಿಪಾಗಿಟ್ಟಿದ್ದರು. ರಾಮಯ್ಯ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ರೈತರು  ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನ್ನ ಜತೆಯಲ್ಲಿ ಹಂಚಿಕೊಂಡಿದ್ದರು' ಎಂದು ಅವರು ಸ್ಮರಿಸಿದರು.ಕೃಷಿ ವಿಶ್ವವಿದ್ಯಾಯದ ಕುಲಪತಿ ಡಾ.ಕೆ.ನಾರಾಯಣಗೌಡ ಅವರಿಗೆ ರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾಧ್ಯಾಪಕ ಡಾ.ಕರೀಗೌಡ ಬೀಚನಹಳ್ಳಿ, ಶಾಸಕ ಡಿ.ನಾಗರಾಜಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ ಮೊದಲಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry