ಗುರುವಾರ , ನವೆಂಬರ್ 21, 2019
26 °C

ರೈತರ ಗೋಳಿಗೆ ಕೊನೆ ಎಲ್ಲಿ...!

Published:
Updated:

ಕೃಷಿಯನ್ನು ನಂಬಿ ಕುಳಿತಿರುವ ರೈತರಿಗೆ ಕೃಷಿ ಮಾರುಕಟ್ಟೆಯಲ್ಲಿ ಅನ್ಯಾಯವಾಗುತ್ತಿದೆ. ಪ್ರಮುಖವಾಗಿ ಹತ್ತಿಯ ಬೆಲೆಯು ಕಳೆದ ಎರಡು ವರ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಈ ವರ್ಷ ಮಾರಾಟವಾಗುತ್ತಿರುವುದು ವಿಷಾದದ ಸಂಗತಿ. ಈ ಬೆಲೆಯು ರೈತನಿಗೆ ಯಾವುದಕ್ಕೂ ಸಾಲುವುದಿಲ್ಲ. ಕಷ್ಟಪಟ್ಟು ಬಿಸಿಲು ಚಳಿ ಎನ್ನದೆ ದುಡಿದರೂ ಗೊಬ್ಬರ, ಕೂಲಿ ಮುಂತಾದವುಗಳ ಬೆಲೆ ತುಟ್ಟಿಯಾಗಿವೆ. ಇದಕ್ಕೆ ದುಡ್ಡು ಖರ್ಚು ಮಾಡಿದರೆ ಏನು ಉಳಿಯುತ್ತದೆ? ಸಂಬಂಧಪಟ್ಟ ಅಧಿಕಾರಿಗಳು ಸೂಕ್ತವಾದ ಬೆಲೆಯನ್ನು ನಿರ್ಧರಿಸಿ ರೈತರ ಕಣ್ಣೀರು ಒರೆಸುವ ಕಾರ್ಯ ಮಾಡಲಿ.

 

ಪ್ರತಿಕ್ರಿಯಿಸಿ (+)