ಮಂಗಳವಾರ, ಜೂನ್ 15, 2021
20 °C

ರೈತರ ಗೋಳು ಕೇಳಿಸುತ್ತಿಲ್ಲವೆ?

ಮಲ್ಲಿಕಾರ್ಜುನಗೌಡ ಬಾಳನಗೌಡ್ರ,ನರಗುಂದ Updated:

ಅಕ್ಷರ ಗಾತ್ರ : | |

ಗೋವಿನಜೋಳ ಬೆಳೆಗಾರರ ಗೋಳಿಗೆ ಕೊನೆಯೇ ಇಲ್ಲ­­ವಾಗಿದೆ. ಸೂಕ್ತ ಬೆಂಬಲ ಬೆಲೆ ಬೇಕು ಮತ್ತು ಖರೀದಿ ಕೇಂದ್ರ­ಗಳು ಸಮರ್ಪಕವಾಗಿ ಗೋವಿನಜೋಳ ಖರೀದಿ­ಸುತ್ತಿಲ್ಲ ಎಂದು ಪ್ರತಿಭಟಿಸಿದ ರೈತರು, ಈಗ ಮತ್ತೊಂದು ಸಮಸ್ಯೆಗೆ ಸಿಲುಕಿದ್ದಾರೆ.ಡಿಸೆಂಬರ್‌ನಲ್ಲಿ ಖರೀದಿ ಕೇಂದ್ರ ಆರಂಭಿಸಿದ ರಾಜ್ಯ ಸರ್ಕಾರ, ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ  ಒಂದು ವಾರದಲ್ಲಿ ಹಣ ಪಾವತಿಸುವ ಭರವಸೆ ನೀಡಿತ್ತು. ಆರಂಭದಲ್ಲಿ ಮಾತ್ರ ಸರಿಯಾದ ಸಮಯಕ್ಕೆ ಹಣ ಪಾವತಿಸಿತ್ತು. ಅನಂತರ ಎರಡು ತಿಂಗಳಾದರೂ ಬಾಕಿ ಹಣವನ್ನು ಪಾವತಿಸದ ಕಾರಣ ಸಾವಿರಾರು ರೈತರು ಹಣಕ್ಕಾಗಿ ಪ್ರತಿನಿತ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಗೆ ಅಲೆಯುವಂತಾಗಿದೆ.ನಿಗಮದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರ್ಕಾರದಿಂದ ಹಣ ಬಂದಿಲ್ಲ ಎಂದು ಜಾರಿಕೊಳ್ಳುತ್ತಾರೆ. ಚುನಾವಣೆಯ ಗುಂಗಿನಲ್ಲಿರುವ ಸರ್ಕಾರಕ್ಕೆ ರೈತರ ಗೋಳು ಕೇಳಿಸುತ್ತಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.