ಗುರುವಾರ , ಮೇ 13, 2021
17 °C

ರೈತರ ಚಿತ್ತ ಈಗ ಅಜೋಲಾದತ್ತ

ಪಂಡಿತ್ ನಾಟೀಕರ್ Updated:

ಅಕ್ಷರ ಗಾತ್ರ : | |

ಕೆ.ಆರ್.ನಗರ: ಹಾಲು ಉತ್ಪಾದನೆಗೆ ಮನೆಗಳಲ್ಲಿ ಹಸುಗಳನ್ನು ಸಾಕುವವರಿಗೆ ಅಜೋಲಾ ಪಾಚಿ ಮೇವು ವರದಾನವಾಗಿದೆ.ಈ ಮೇವಿನಲ್ಲಿ ಪ್ರೊಟಿನ್, ಖನಿಜಾಂಶದ ಪ್ರಮಾಣ ಹೇರಳವಾಗಿದ್ದು, ನಿತ್ಯ ಒಂದು ಕೆ.ಜಿ ಅಜೋಲಾ ಹಸುವಿಗೆ ನೀಡಿದರೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ. ಅಲ್ಲದೇ, ಹಸು ಸಮಯಕ್ಕೆ ಸರಿಯಾಗಿ ಗರ್ಭಧರಿಸುತ್ತದೆ.ಅಜೋಲಾಪಾಚಿ ಕಡಿಮೆ ಖರ್ಚಿನಲ್ಲಿ ಬೆಳೆಯ ಬಹುದಾದ ಮೇವು. 10್ಡ4 ಅಡಿ ಸುತ್ತಳತೆ ಮತ್ತು 1 ಅಡಿ ಆಳದ ಗುಂಡಿಯಲ್ಲಿ ಪ್ಲಾಸ್ಟಿಕ್ ಹಾಕಿ ನೀರು ಶೇಖರಿಸಬೇಕು. ಮಿಶ್ರಣಗೊಳಸಿದ 15 ಕೆ.ಜಿ. ಕೆಮ್ಮಣ್ಣು, 5 ಕೆ.ಜಿ. ಸೆಗಣಿ, 1 ಕೆ.ಜಿ ಅಜೋಲಾ ಬೀಜ ಹಾಕಬೇಕು. ಜತೆಗೆ 20 ಗ್ರಾಂ ರಾಸಾಯನಿಕ ಬೂದಿ, 20 ಗ್ರಾಂ ಖನಿಜ ಮಿಶ್ರಣ ಮಾಡುವುದರಿಂದ 12ರಿಂದ 15ದಿನಗಳಲ್ಲಿ ಅಜೋಲಾ ಬೆಳೆದಿರುತ್ತದೆ.ಒಂದು ಬಾರಿ ಬೆಳೆದ ಅಜೋಲಾಗೆ ಮತ್ತೆ ಬಿತ್ತನೆ ಬೀಜ ಹಾಕಬೇಕಾಗಿಲ್ಲ. ಆದರೆ, 15 ದಿನಕ್ಕೊಮ್ಮೆ ನೀರು ಬದಲಿಸಿದರೆ ಸಾಕು. ಜತೆಗೆ ಕೆಮ್ಮಣ್ಣು, ಸೆಗಣಿ, ರಾಸಾಯನಿಕ, ಖನಿಜ ಹಾಕಬೇಕು. ಹೀಗೆ ಬೆಳೆದ ಅಜೋಲಾವನ್ನು ಒಂದು ಹಸುವಿಗೆ ಒಂದು ಕೆ.ಜಿ. ಕೊಡಬೇಕು.ಅಜೋಲಾ ಕಬ್ಬಿಣದ ಜಾಲರಿಯಲ್ಲಿ ತೆಗೆದು ತೊಳೆದ ಬಳಿಕ ಹಸುವಿಗೆ ನೀಡಬೇಕು. ತೊಟ್ಟಿಯಲ್ಲಿ ಬೆಳೆದ ಅಜೋಲಪಾಚಿ ಮೇವು ಪ್ರತಿನಿತ್ಯ ಒಂದು ಕೆ.ಜಿ. ಹೊರತೆಗೆಯಬೇಕಾಗುತ್ತದೆ. ಇಲ್ಲವಾದರೆ ಬೂಸ್ಟ್ ಹಿಡಿಯುತ್ತದೆ. ಬೂಸ್ಟ್ ಹಿಡಿದ ಅಜೋಲಾ ಹಸುಗಳಿಗೆ ಮಾರಕ.ತಾಲ್ಲೂಕಿನಲ್ಲಿ ಈ ಮೇವಿನ ಮಹತ್ವದ ಜಾಗೃತಿ ಮೂಡುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಅಶೋಕ್ ರೈತರಿಗೆ ಮನವರಿಕೆ ಮಾಡುತ್ತಿದ್ದಾರೆ.  ಇವರ ಮಾರ್ಗದರ್ಶನದಲ್ಲಿ ತಾಲ್ಲೂಕಿನಲ್ಲಿ 18ರಿಂದ 20 ರೈತರು ತಮ್ಮ ಮನೆಗಳಲ್ಲಿಯೇ ಅಜೋಲಪಾಚಿ ಮೇವು ಬೆಳೆದು ಯಶಸ್ವಿಯಾಗಿದ್ದಾರೆ.`ಇದೊಂದು ಸಾವಯವ ಮೇವು. ಯಾವುದೇ ಅಡ್ಡಪರಿಣಾಮಗಳಿಲ್ಲ. ಕಡಿಮೆ ಖರ್ಚಿನಲ್ಲಿ ಸರಳ ವಿಧಾನದಲ್ಲಿ ಅಜೋಲ ಬೆಳೆಯುವ ವಿಧಾನಗಳ ಬಗ್ಗೆ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಂಸ್ಥೆಯ ಸಿಬ್ಬಂದಿ ಮಾರ್ಗದರ್ಶನ ನೀಡುತ್ತಾರೆ' ಎನ್ನುತ್ತಾರೆ ಯೋಜನೆಯ ಅಧಿಕಾರಿ ಅಶೋಕ್.

ಹಸುಗಳಿಗೆ ಇಷ್ಟ

ಖಾಸಗಿ ಕಾಲೇಜಿನಲ್ಲಿಉಪನ್ಯಾಸಕನಾಗಿದ್ದ ನನಗೆ ಕಾಲೇಜು ಆಡಳಿತ ಮಂಡಳಿ ಕೊಡುವ ವೇತನ ಸಾಲದೇ ಕೆಲಸ ತೊರೆದು ಕೃಷಿಯಲ್ಲಿ ತೊಡಗಿದ್ದೇನೆ. ಮನೆಯಲ್ಲಿ ನಾಲ್ಕು ಹಸು, ಮೂರು ಕರುಗಳಿವೆ. 20 ದಿನಗಳಿಂದ ನಮ್ಮ ಮನೆಯಲ್ಲಿ ಮೇವು ಬೆಳೆಸುತ್ತಿದ್ದೇವೆ. ಇದನ್ನು ಹಸುಗಳು ಇಷ್ಟಪಡುತ್ತಿವೆ

-ಪಾಲಾಕ್ಷ,

ಬಸವರಾಜಪುರದ ರೈತ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.