ರೈತರ ದು:ಸ್ಥಿತಿಗೆ ರಾಜ್ಯ ಸರ್ಕಾರವೇ ಹೊಣೆ: ಎಚ್‌ಡಿಕೆ

7

ರೈತರ ದು:ಸ್ಥಿತಿಗೆ ರಾಜ್ಯ ಸರ್ಕಾರವೇ ಹೊಣೆ: ಎಚ್‌ಡಿಕೆ

Published:
Updated:

ರಾಮದುರ್ಗ: ಕೇಂದ್ರದ ಆರ್ಥಿಕ ನೀತಿ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.ಪಟ್ಟಣದಲ್ಲಿ ಪಿ.ಎಫ್. ಪಾಟೀಲ ಅವರು ಏರ್ಪಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾ ಡಿದ ಅವರು, ರಾಜ್ಯ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅದರಲ್ಲೂ ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಆರೋಪಿಸಿದರು.ಗೊಬ್ಬರದ ಬೆಲೆ ಏರಿಕೆ ಕೇಂದ್ರದ ರೈತ ವಿರೋಧಿ ನೀತಿಗೆ ತಾಜಾ ಉದಾಹರಣೆ ಎಂದ ಅವರು, ರಾಜ್ಯ ಸರ್ಕಾರವೂ ಸಹ ರೈತರ ಪ್ರಗತಿಗೆ ಮುಂದಾಗಿಲ್ಲ. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಕೆಲಸ ಕುಂಟುತ್ತ ಸಾಗಿದೆ. ಇದರಿಂದ ಬೇಸತ್ತಿರುವ ರೈತರು ಪುನಃ ಆತ್ಮಹತ್ಯೆ ಮಾಡಿಕೊಳ್ಳುವಂತಹ ವಾತಾವರಣ ವನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ ಎಂದು ಆಪಾದಿಸಿದರು.ರಾಜ್ಯದಲ್ಲಿ 1999ರಿಂದ ಮೂರು ವರ್ಷ ಭೀಕರ ಬರಗಾಲದ ಛಾಯೆ ಆವ ರಿಸಿತ್ತು. ಆಗ ಸುಮಾರು 8000ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ಘಟಿಸಿದ್ದವು. ಅಂತಹ ಘಟನೆಗಳು ಮರು ಕಳಿಸದಂತೆ ಜಾಗೃತಿ ವಹಿಸಲು ತಮ್ಮ ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಅನೇಕ ಅಡಚಣೆಗಳು ಬಂದರೂ ಎದೆಗುಂದದೆ ರೂ.2, 500 ಕೋಟಿ ಸಾಲ ಮನ್ನಾ ಮಾಡಲಾಗಿತ್ತು.

 

ಇದರಲ್ಲಿ ಬೆಳಗಾವಿ, ಬಾಗಲಕೋಟ ಮತ್ತು ಬಿಜಾಪುರ ಜಿಲ್ಲೆಯ ಭಾಗಕ್ಕೆ ರೂ.700 ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಈಗ ರೂ.5,600 ಕೋಟಿ  ಮೊತ್ತದ ಬೆಳೆ ಹಾನಿ ಸಂಭವಿಸಿದೆ. ಮುಖ್ಯಮಂತ್ರಿಗಳೇ ಹೇಳಿದ್ದರೂ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.`ಪರಸ್ಪರ ಕೆಸರೆರಚಾಟ ಬಿಜೆಪಿ ಸಾಧನೆ~ 

ರಾಮದುರ್ಗ:
ಕಳೆದ ನಾಲ್ಕು ವರ್ಷಗಳ ಅವಧಿಯ ಬಿಜೆಪಿ ಸರ್ಕಾರದ ಆಡಳಿತ ದಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ಗಳು ಜರುಗಲಿಲ್ಲ. ಎಲ್ಲ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿ ಜನರ ಕಷ್ಟಗಳನ್ನು ನಿವಾರಿಸಲು ವಿಫಲ ರಾಗಿದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲ್ಲಿ ಬುಧವಾರ ಪಿ.ಎಫ್. ಪಾಟೀಲರು ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಅವರು, ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದರು.ಹಿಂದಿನ ತಮ್ಮ ಅಧಿಕಾರದ ಅವಧಿ ಯಲ್ಲಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಜಾರಿ ಯಾದ ಯೋಜನೆಗಳನ್ನು ತಾವೇ ಮಾಡಿ ರುವುದಾಗಿ ಹೇಳಿಕೊಳ್ಳುತ್ತ ಬಿಜೆಪಿಯ ವರು ಕಾಲಹರಣ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದರೂ ಅವರಲ್ಲಿರು ವವರೇ ವಿರೋಧ ಪಕ್ಷದವರಂತೆ ವರ್ತಿ ಸುತ್ತಿದ್ದಾರೆ. ಒಬ್ಬರನ್ನೊಬ್ಬರು ದೂಷಿ ಸುವ ಕಾರ್ಯವು ನಿರಂತರವಾಗಿ ನಡೆದಿದೆ ಎಂದರು.ಮೊದಲ ಬಾರಿ ದಕ್ಷಿಣ ಭಾರತದಲ್ಲಿ ಬಹಳ ನಿರೀಕ್ಷೆಯಲ್ಲಿ ಮತದಾರರು ಬಿಜೆಪಿಯನ್ನು ಗೆಲ್ಲಿಸಲು ಮುಂದಾ ಗಿದ್ದರು. ಆದರೆ ಬಿಜೆಪಿ ಜನರ ನಿರೀಕ್ಷೆ ಯನ್ನು ಹುಸಿಗೊಳಿಸಿದೆ. ಇನ್ನೆಂದೂ ಕರ್ನಾಟಕದಲ್ಲಿ ಬಿಜೆಪಿಗೆ ಅವಕಾಶ ದೊರೆಯುವುದಿಲ್ಲ. ಬೇಸರಗೊಂಡಿರುವ ಮತದಾರರು ಕರ್ನಾಟಕದಲ್ಲಿ ಬಿಜೆಪಿ ಯನ್ನು ಬೇರು ಸಮೇತ ಕಿತ್ತು ಹಾಕಲಿದ್ದಾರೆ ಎಂದು ಹೇಳಿದರು.ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸದೇ ಕೇವಲ ಪರಸ್ಪರ ಆಂತರಿಕ ಕಚ್ಚಾಟದಲ್ಲಿಯೇ ಈ ಸರ್ಕಾರ ತೊಡಗಿದೆ. ಅಭಿವೃದ್ಧಿಯ ಜಪ ಮಾಡು ತ್ತಿರುವ ಬಿಜೆಪಿ ವಿಧಾನಸಬೆ ವಿಸರ್ಜಿಸಿ ಜನರ ಬಳಿಗೆ ಹೋಗಲಿ ಎಂದರು.ಪಕ್ಷಕ್ಕೆ ಬರುವವರನ್ನು ಸೂಕ್ಷ್ಮವಾಗಿ ಪರಿಗಣಿಸಿ ಸ್ವಾಗತಿಸಲಾಗುವುದು. ಭ್ರಷ್ಟಾಚಾರದಲ್ಲಿ ಮುಳುಗಿದ್ದವರನ್ನು ಸೇರಿಸಿಕೊಂಡರೆ ಪಕ್ಷಕ್ಕೆ ಕ್ಯಾನ್ಸ್‌ರ ತಗುಲಲಿದೆ. ಜಾಗೃತೆಯಿಂದ ಪಕ್ಷವನ್ನು ಉಳಿಕೊಳ್ಳುವುದಾಗಿ ನುಡಿದ ಅವರು, ಕಳೆದ ಚುನಾವಣೆಯಲ್ಲಿ ಹಾಗೂ ನಂತರ ಪಕ್ಷ ತೊರೆದು ಹೋದವರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.ಗುಲ್ಬರ್ಗದಲ್ಲಿ ಯಡಿಯೂರಪ್ಪನ ವರು ಮಾಡಿದ ಪ್ರಗತಿಗಿಂತಲೂ ಸದಾ ನಂದಗೌಡರು ಹೆಚ್ಚಿನ ಪ್ರಗತಿಯನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದೇನೆ ಹೊರತು ಯಾರನ್ನೂ ಹೊಗಳುವುದಕ್ಕೆ ಹೇಳಿಲ್ಲ. ಮಾಧ್ಯಮ ದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಮುಖ್ಯಮಂತ್ರಿ ಸದಾನಂದಗೌಡರ ಬಗ್ಗೆ ಮೃದು ಧೋರಣೆ ತೋರಿಲ್ಲ. ಈಗಿನ ಮುಖ್ಯಮಂತ್ರಿಗಳು ಕಾನೂನು ಬಾಹಿರ ಕೆಲಸ ಮಾಡಿರುವುದು ಕಂಡುಬಂದಿಲ್ಲ. ಸಮಯ ಬಂದರೆ ಎಂತಹ ಪರಿಸ್ಥಿಯನ್ನು ಎದುರಿಸಲು ಸಿದ್ದ ಎಂದು ಪ್ರಶ್ನೆಗೆ ಉತ್ತರಿಸಿದರು.

 

ಇಂದಿನ ರಾಜಕಾರಣಿ ಗಳು ಕೇವಲ ಸ್ವಾರ್ಥದ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಂತೆಯೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಜೈಲು ಸೇರುತ್ತಿದ್ದಾರೆ. ಯುವಕರು ರಾಜ ಕಾರಣವನ್ನು ವ್ಯವಹಾರಿಕವಾಗಿ ಬಳಸಿ ಕೊಳ್ಳಬಾರದು. ಭ್ರಷ್ಟತೆಗೆ ಮುಂದಾಗಕೂಡದು ಎಂದು  ಸಲಹೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry