ಸೋಮವಾರ, ಮಾರ್ಚ್ 8, 2021
26 °C

ರೈತರ ಧರಣಿ 8ನೇ ದಿನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಧರಣಿ 8ನೇ ದಿನಕ್ಕೆ

ಹಾವೇರಿ: ಕಳಪೆ ಬಿಟಿ ಹತ್ತಿ ಬೀಜದಿಂದ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ ೮ನೇ ದಿನಕ್ಕೆ ಕಾಲಿರಿಸಿದೆ.ರೈತ ಸಂಘದ ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ರೈತ ಮುಖಂಡರಾದ, ಸುರೇಶ ಚಲವಾದಿ, ಚಂದ್ರುಗೌಡ ಗಡೆಪ್ಪಗೌಡ್ರ, ಯಲ್ಲಪ್ಪ ತೋಟಿಗೇರ, ಗೋಳಿಬಸಪ್ಪ ಕೋಡ, ಮಾಬೂಸಾಬ ಬಂಕಾಪುರ, ಷಣ್ಮುಖಪ್ಪ ಸಣ್ಮನಿ, ಸುರೇಶ ಗೊಳಿಹೊಳೆ, ಶಿವಬಸಪ್ಪ ಗೋವಿ, ಬಸವಂತಪ್ಪ, ಸೈಯದ್‌ಸಾಬ್‌ ಬಿಲೊರಿ, ಸುರೇಶ ಚಲವಾದಿ ಸೇರಿದಂತೆ ನೂರಾರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.