ರೈತರ ಬದುಕಿನತ್ತ ಬೆಳಕು ಚೆಲ್ಲಿ

7

ರೈತರ ಬದುಕಿನತ್ತ ಬೆಳಕು ಚೆಲ್ಲಿ

Published:
Updated:

ಕುಷ್ಟಗಿ: ಬದಲಾಗುತ್ತಿರುವ ಸಾಮಾಜಿಕ, ಜಾಗತಿಕ ವ್ಯವಸ್ಥೆಯಲ್ಲಿ ರೈತರ ಬದುಕಿನ ಮೇಲೆ ಬೆಳಕು ಚೆಲ್ಲುವಂತಹ ಲೇಖನಗಳು ಹೆಚ್ಚಾಗಿ ಹೊರಬರುತ್ತಿಲ್ಲ ಎಂದು ಪ್ರಾಚಾರ್ಯ ರಾಜೇಂದ್ರ ಪಂತ ವಿಷಾದಿಸಿದರು.ತಾಲ್ಲೂಕಿನ ಹನುಮಸಾಗರದಲ್ಲಿ ಈಚೆಗೆ ಬಾಲಕರ ಸರ್ಕಾರಿ ಪ್ರೌಢಶಾಲೆಯ ಕಾರ್ಯಕ್ರಮದಲ್ಲಿ ಅವರು, ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಪ್ರಕಟಿಸಿದ, ಲೇಖಕ ಕಿಶನರಾವ್ ಕುಲಕರ್ಣಿ ಅವರ “ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು~ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.ಹೈಟೆಕ್ ಸಂಸ್ಕತಿ ಎಂಬ ಅರಗಿನ ಅರಮನೆಯ ಮೋಹಕ್ಕೊಳಗಾಗುತ್ತಿರುವ ಯುವಜನತೆ ಕೃಷಿ ಬದುಕಿನಿಂದ ವಿಮುಖರಾಗುತ್ತಿದ್ದಾರೆ. ಅನೇಕ ಜನ ವಿದ್ಯಾವಂತರು ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ. ಅಂಥವರಿಗೆ ಸ್ವಾವಲಂಬನೆಯ ದಾರಿ ತೋರಿಸುವಲ್ಲಿ ಇಂಥ ಪುಸ್ತಕಗಳು ನೆರವಿಗೆ ಬರುತ್ತವೆ ಎಂದರು.ಪುಸ್ತಕ ವಿಮರ್ಶಿಸಿದ ಹನುಮಸಾಗರ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ ಜಮಖಂಡಿಕರ ಮಾತನಾಡಿ, ಸರಳವಾಗಿ ಓದಿ ಮುಗಿಸಲು ಸಾಧ್ಯವಾಗುವಂತಿರುವ ಈ ಕಿರು ಪುಸ್ತಕದಲ್ಲಿ ಹೈನುಗಾರಿಕೆಯಲ್ಲಿ ರೈತರ ಸ್ವಾಲಂಬಿ ಬದುಕಿನ ಮಜಲುಗಳನ್ನು ತಿಳಿಸಿಕೊಡುವ  ಲೇಖಕ ಕಿಶನ್‌ರಾವ್   ಪ್ರಯತ್ನ ಸಾರ್ಥಕವಾಗಿದೆ ಎಂದರು. ಗುರುರಾಜ ದೇಸಾಯಿ ಮಾತನಾಡಿ, ಕೇವಲ ರೈತರ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರೆ ಸಾಲದು ಅವರ ವಾಸ್ತವಿಕ ಬದುಕು ಕುರಿತು ಚಿಂತನೆ ನಡೆಸಬೇಕು ಎಂದರು. ಅಲ್ಲದೇ `ರೈತ ಸಂಸ್ಕೃತಿ~ ಅಳಿದು ಹೋಗುತ್ತಿರುವ ಪ್ರಸಕ್ತ ದಿನಗಳಲ್ಲಿ ಅದರ ಉಳಿವಿಗೆ ಇಂಥಹ ಪುಸ್ತಕಗಳು ದಾರಿದೀಪಆಗಬಲ್ಲವು ಎಂದು ಹೇಳಿದರು.ಲೇಖಕ ಕಿಶನರಾವ್ ಕುಲಕರ್ಣಿ ಮಾತನಾಡಿ, ತಾಲ್ಲೂಕಿನ ತಳುವಗೇರಾ ಗ್ರಾಮದ ಯಲ್ಲಪ್ಪ ಬಲಕುಂದಿ ಮತ್ತು ಯಲ್ಲಮ್ಮ ಬಲಕುಂದಿ ಅವರ ಸ್ವಾವಲಂಬಿ ಬದುಕು ಪುಸ್ತಕ ಬರೆಯಲು ಪ್ರೇರಣೆಯಾದರೆ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಸಹಕಾರದಿಂದ ಯಶಸ್ವಿ ರೈತರ ಕುರಿತ ಲೇಖನ ಬರೆಯಲು ಸಾಧ್ಯವಾಯಿತು ಎಂದರು.ಅಧ್ಯಕ್ಷತೆ ವಹಿಸಿದ್ದ ಕೃಷ್ಣಮೂರ್ತಿ ಭಂಡಾರಿ, ಎಸ್‌ಡಿಎಂಸಿ ಅಧ್ಯಕ್ಷ ಸಂಗಯ್ಯ ವಸ್ತ್ರದ, ಬಾಲಕರ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಎಂ.ಡಿ.ಮಕಾನದಾರ, ಮುಖ್ಯಶಿಕ್ಷಕ ವಿ.ಬಿ.ಉಪ್ಪಿನ, ಮಹಾಂತೇಶ ಗೋನಾಳ, ವಿಶ್ವನಾಥ ನಾಗೂರ, ಕೃಷ್ಣಮೂರ್ತಿ ಭಂಡಾರಿ ಮಾತನಾಡಿದರು.ಬಲಕುಂದಿ ರೈತ ದಂಪತಿ ಯಲ್ಲಪ್ಪ ಬಲಕುಂದಿ ಮತ್ತು ಯಲ್ಲಮ್ಮ ಬಲಕುಂದಿ, ಜಿಲ್ಲಾ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್‌ಕರೀಂ ವಂಟೆಳಿ, ಅಮರೇಶ ತಮ್ಮಣ್ಣವರ,  ಶ್ರೀನಿವಾಸ ಜಹಗೀರದಾರ, ರಾಜೇಶ ಕಂಬದ   ಇದ್ದರು. ಮಲ್ಲಿಕಾರ್ಜುನ ಮ್ಯಾಗೇರಿ ಸ್ವಾಗತಿಸಿದರು. ಗೀತಾ ದೇವಾಂಗಮಠ  ನಿರೂಪಿಸಿದರು. ವೀರೇಶಪ್ಪ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry