ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

7

ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

Published:
Updated:

ಸಂಡೂರು: ಅರಣ್ಯ ಇಲಾಖೆಯು ಬಡರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಕಿಸಾನ್ ಸಭಾ ತಾಲ್ಲೂಕು ಘಟಕದ ಕಾರ್ಯಕರ್ತರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.`ಸುಮಾರು ಅರ್ಧ ಶತಮಾನದಿಂದ ಅರಣ್ಯಭೂಮಿಯಲ್ಲಿ ಉಳುಮೆ ಮಾಡಿ ಬದುಕುತ್ತಿರುವ ಬಡ ರೈತರಿಗೆ ಈಗ ಸಾಗುವಳಿ ಮಾಡದಂತೆ ಅರಣ್ಯ ಇಲಾಖೆ ತಡೆಯೊಡ್ಡುತ್ತಿದೆ. ಅತಿಕ್ರಮಣವನ್ನು ಸಕ್ರಮಗೊಳಿಸುವ ಆದೇಶವಿದ್ದು, ಈ ನಿಟ್ಟಿನಲ್ಲಿ ರೈತರನ್ನು ಗುರುತಿಸಿ ಸಕ್ರಮಗೊಳಿಸುವ ಪ್ರಕ್ರಿಯೆ ಇಲ್ಲಿಯವರೆಗೂ ನಡೆದಿಲ್ಲ. ರೈತರ ಅತಿಕ್ರಮಣ ಸಕ್ರಮಗೊಳಿಸುವ 2ನೇ ಆದೇಶ (1980)ವಿದ್ದರೂ ಕಂದಾಯ ಇಲಾಖೆಯ ಅಧಿಕಾರಿಗಳು ಮೀನ-ಮೇಷ ಎಣಿಸುತ್ತಿದ್ದಾರೆ~ ಎಂದು ಕಿಸಾನ್ ಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ನಿಂಗಪ್ಪ ಆಕ್ರೋಶ ವ್ಯಕ್ತಪಡಿಸಿದರು.ಅಂತಾಪುರ, ಚಿಕ್ಕಂತಾಪುರ, ಸುಲ್ತಾನಪುರ ಗ್ರಾಮಸ್ಥರು ಮತ್ತು ರೈತರಿಗೆ ಜಿಂದಾಲ್‌ನ ಪದ್ಮಾವತಿ , ಕೆ.ಎಂ.ಎಂ.ಐ, ಐಎಸ್‌ಟಿ, ಮೆದು ಕಬ್ಬಿಣ ಘಟಕದಿಂದ ಎಂದು ಕಿಸಾನ್ ಸಭಾದ  ಉಪಾಧ್ಯಕ್ಷ ಬಿ. ವಿರೇಶಪ್ಪ ಆರೋಪಿಸಿದರು. ಕಾರ್ಯದರ್ಶಿ ಆರ್.ಸ್ವಾಮಿ, ಸಂಚಾಲಕ ಬಿ.ಅಬ್ದುಲ್, ಚಾಂದ್ ಹುಸೇನ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿ.ನಾಗರತ್ನಮ್ಮ, ಪೀರಮ್ಮಾ, ಸರೋಜಮ್ಮಾ, ಜಿ.ಈರಮ್ಮಾ, ಸಾವಿತ್ರಿಬಾಯಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry