ಮಂಗಳವಾರ, ನವೆಂಬರ್ 19, 2019
26 °C

ರೈತರ ಸಮಸ್ಯೆಗಳ ಪರಿಹಾರವೇ ಗುರಿ

Published:
Updated:

ಮಂಡ್ಯ: ರೈತಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ ಕೆ.ಎಸ್. ನಂಜುಂಡೇಗೌಡ ಅವರು ಶ್ರೀರಂಗಪಟ್ಟಣ ಕ್ಷೇತ್ರದಿಂದ ಕರ್ನಾಟಕ ಸರ್ವೋದಯ ಪಕ್ಷದಿಂದ ಆರನೇ ಬಾರಿಗೆ ಕಣಕ್ಕೆ ಇಳಿದಿದ್ದಾರೆ. ಪ್ರತಿ ಬಾರಿಯೂ ಮತಗಳ ಸಂಖ್ಯೆಯನ್ನು ಹೆಚ್ಚಿಸಿಕೊ ಳ್ಳುತ್ತಾ ಸಾಗಿದ್ದಾರೆ. ಆದರೆ ಗೆಲುವಿನ ಗೆರೆಯನ್ನು ಮುಟ್ಟಲಾಗಿಲ್ಲ. ಈ ಬಾರಿ ಆ ಗೆರೆಯನ್ನು ಮುಟ್ಟಲು ಸುಸಜ್ಜಿತವಾಗಿ ವ್ಯಾಪಕ ಪ್ರಚಾರ ಕೈಗೊಂಡಿರುವ ಅವರೊಂದಿಗೆ ನಡೆಸಿದ `ಪ್ರಜಾವಾಣಿ' ಸಂದರ್ಶನ ಇಂತಿದೆ.


ಪ್ರ-ಕ್ಷೇತ್ರದಲ್ಲಿ ಪ್ರಚಾರ ಹೇಗೆ ಸಾಗಿದೆ?

ಪ್ರಚಾರ ವ್ಯವಸ್ಥಿತವಾಗಿ ನಡೆದಿದೆ. ಒಂದೂವರೆ ತಿಂಗಳಿನಿಂದ ಮತದಾನ ಯಾಕೆ ಮಾಡಬೇಕು. ಹಣ ಹಾಗೂ ಹೆಂಡಕ್ಕೆ ಮತಗಳನ್ನು ಮಾರಾಟ ಮಾಡಿಕೊಳ್ಳಬಾರದು. ಮಾಡಿಕೊಂಡರೆ ಐದು ವರ್ಷಗಳ ಕಾಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗೆಗೆ ಜಾಗೃತಿ ಮೂಡಿಸಿದ್ದೇವೆ.

ಜನರಿಗೆ ಈ ಬಾರಿ ನೀರಿನ ಮಹತ್ವ ಗೊತ್ತಾಗಿದೆ. ನೀರಿನ ಉಳಿಯುವಿಕೆಗಾಗಿ ಯಾರು ಹೋರಾಟ ಮಾಡುತ್ತಾರೆ ಎಂಬುದೂ ಜನರಿಗೆ ತಿಳಿಸಿದೆ. ಆದ್ದರಿಂದ ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ಕೋರುತ್ತಿದ್ದೇನೆ.

ಪ್ರ-ಹಿಂದಿನ ಚುನಾವಣೆಗಳಿಗಿಂತ ಈ ಚುನಾವಣೆ ಹೇಗೆ ಭಿನ್ನವಾಗಿದೆ?


ಈ ಬಾರಿ ಕಾಂಗ್ರೆಸ್‌ನಿಂದ ಇಬ್ಬರು ಅಭ್ಯರ್ಥಿಗಳು ನಿಂತಿರುವುದು ಮತಗಳು ಹಂಚಿಕೆಯಾಗಲಿವೆ. ನನಗೆ ಕೆಜೆಪಿ ಬೆಂಬಲ ನೀಡಿರುವುದರಿಂದ ಹೆಚ್ಚಿನ ಬಲ ದೊರೆತಿದೆ. ಐದು ಬಾರಿ ಸೋತಿರುವುದು ಜನರ ಮನದಲ್ಲಿ ಅನುಕಂಪ ಮೂಡಿಸಿದೆ.ಪ್ರ- ರೈತರ ಸಮಸ್ಯೆಗಳೇನು?

ಸಮಸ್ಯೆಗಳು ಬಹಳಷ್ಟಿವೆ. ಆದರೆ ಪರಿಹಾರ ಸಿಕ್ಕಿಲ್ಲ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಸಿಗುವುದಿಲ್ಲ. ಕಾವೇರಿ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಗೊಬ್ಬರ, ಬೀಜಗಳ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ವಿದ್ಯುತ್ ಕಡಿತ ಹೆಚ್ಚಾಗಿದೆ. ರೈತರ ಬದುಕು   ಪೂರ್ತಿ ದುಸ್ತರವಾಗಿದೆ.ಪ್ರ-ನಿಮಗೆ ಯಾಕೆ ಮತ ನೀಡಬೇಕು?

ಚುನಾವಣೆಯಲ್ಲಿ ಸೋಲಿಸಿದ ನಂತರವೂ ರೈತರ ಪರ ಹೋರಾಟಗಳನ್ನು ಮುಂದುವರಿಸಿದ್ದೇನೆ. ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರೈತರ ಸಮಸ್ಯೆಗಳ ಬಗೆಗೆ ಸರ್ಕಾರದ ಗಮನ ಸೆಳೆಯುತ್ತೇನೆ.

ಪ್ರ-ನಿಮ್ಮ ಭರವಸೆಗಳು ಏನು?

ರೈತರಿಗೆ ಆಗುವ ಅನ್ಯಾಯ ತಡೆಯ ಲಾಗು ವುದು. ಬೆಳೆದ ಉತ್ಪನ್ನ ಗಳಿಗೆ ಉತ್ತಮ ಬೆಲೆ ದೊರಕಿಸುವುದು. ಪೊಲೀಸ್ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜನಸ್ನೇಹಿ ವಾತಾವರಣ ನಿರ್ಮಾಣ. ಪ್ರವಾಸೋದ್ಯಮ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಲಾಗುವುದು.

ಪ್ರತಿಕ್ರಿಯಿಸಿ (+)