ರೈತರ ಸಮಸ್ಯೆ: ಕೇಂದ್ರಕ್ಕೆ ನಿಯೋಗ - ಡಿಕೆಸಿ

7

ರೈತರ ಸಮಸ್ಯೆ: ಕೇಂದ್ರಕ್ಕೆ ನಿಯೋಗ - ಡಿಕೆಸಿ

Published:
Updated:
ರೈತರ ಸಮಸ್ಯೆ: ಕೇಂದ್ರಕ್ಕೆ ನಿಯೋಗ - ಡಿಕೆಸಿ

ಕನಕಪುರ: ದೇಶದ ಬೆನ್ನೆಲುಬಾದ ರೈತ ಇಂದು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕ್ಕಿದ್ದಾನೆ, ಆತನ ಉತ್ತಮ ಬದುಕನ್ನು ರೂಪಿಸಿವ ನಿಟ್ಟಿನಲ್ಲಿ ಸರ್ಕಾರಿ ನಿರಂತರ ಪ್ರಯತ್ನಿಸುತ್ತಿದೆ ಎಂದು ಶಾಸಕ ಡಿ.ಕೆ. ಶಿವಕುಮಾರ್ ತಿಳಿಸಿದರು.ತಾಲ್ಲೂಕಿನ ಸಾತನೂರು ಸಂತೆ ಮಾಳದಲ್ಲಿ ರೇಷ್ಮೆ ಇಲಾಖೆ ಏರ್ಪಡಿಸಿದ್ದ  ರೇಷ್ಮೆಳೆಗಾರರ ವಿಚಾರ ಸಂಕಿರಣ ಹಾಗೂ ಫಲಾನುಭವಿಗಳಿಗೆ ಸವಲತ್ತು ವಿತರಣೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಾ ತಾಲ್ಲೂಕಿನಲ್ಲಿ ರೇಷ್ಮ ಮತ್ತು ಹಾಲು ಉತ್ಪಾದನೆ ಪ್ರಮುಖ ಕಸುಬುಗಳಾಗಿದ್ದು ಪ್ರಸ್ತುತ ಸಂದರ್ಭದಲ್ಲಿ ರೇಷ್ಮೆ ಬೆಲೆ ಕುಸಿತದಿಂದ ರೈತ ಕಂಗಲಾಗಿದ್ದಾರೆ.  ರೇಷ್ಮೆ ಸಮಸ್ಯೆಗಳ ಹಾಗೂ ರಾಜ್ಯದ ಪರಿಸ್ಥಿತಿಯ ಬಗ್ಗೆ ತಿಳಿಸಲು ಕೇಂದ್ರಕ್ಕೆ ರಾಜ್ಯದಿಂದ ನಿಯೋಗ ಹೋಗಿದ್ದು. ರೇಷ್ಮೆಗೆ ಬೆಂಬಲ ದೊರೆಯುವಂತೆ ಪ್ರಯತ್ನಿಸಲಾಗುವುದು, ರೇಷ್ಮೆ ಬೆಳೆಗಾರರು ಆತ್ಮಸ್ಥೈರ್ಯ ಕಳೆದುಕೊಳ್ಳವುದು ಬೇಡವೆಂದು ಧೈರ್ಯ ಹೇಳಿದರು. ಸಾತನೂರು ಹೋಬಳಿ ಸೇರಿದಂತೆ ವಿವಿದೆಡೆ ದೊರೆಯುತ್ತಿರುವ ನೀರು ಕುಡಿಯಲು ಅನರ್ಹವಾಗಿದ್ದು ಶಿಂಷಾ ನದಿಯಿಂದ ಸುಮಾರು 100 ಕೋಟಿ ರೂ ವೆಚ್ಚದಲ್ಲಿ ಪ್ರತ್ಯೇಕ ವಾಟರ್‌ಲೈನ್ ತಂದು ತಾಲ್ಲೂಕಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಕೈಗೊಳ್ಳಲಾಗಿದೆ, ಸಾತನೂರು ಕ್ಷೇತ್ರವು ರಾಮನಗರ ಕ್ಷೇತ್ರಕ್ಕೆ ಸೇರ್ಪಡೆಯಾಗುತ್ತಿದ್ದನ್ನು ಹೋರಾಟ ಮಾಡಿ ತಪ್ಪಿಸಿ ಕನಕಪುರ ಕ್ಷೇತ್ರದಲ್ಲಿಯೇ ಉಳಿಸಿಕೊಳ್ಳಲಾಗಿದೆ, ಅದರಂತೆ  ಸಾತನೂರಿನಲ್ಲಿ ಅಗತ್ಯವಿರುವ ಎಲ್ಲಾ ಇಲಾಖೆಗಳನ್ನು ನಿರ್ಮಿಸುವ ಮೂಲಕ ಅಭಿವೃದ್ಧಿ ಪಡಿಸಲಾಗುವುದೆಂದು ಭರವಸೆ ನೀಡಿದರು.   ಉದ್ಯೋಗ ಅರಸಿಕೊಂಡು ತಾಲ್ಲೂಕಿನ 50 ಸಾವಿರ ಕುಟುಂಬಗಳು ಬೆಂಗಳೂರಿಗೆ ಈಗಾಗಲೆ ವಲಸೆ ಹೋಗಿವೆ, ಅದನ್ನು ತಡೆಗಟ್ಟಲು ತಾಲ್ಲೂಕಿಗೆ ಹೆಚ್ಚಿನ ಗಾರ್ಮೆಂಟ್ಸ್, ಪ್ಯಾಕ್ಟರಿಗಳನ್ನು ತರುವ ಮೂಲಕ  ಇಲ್ಲಿಯೇ ಉದ್ಯೋಗ ಸೃಷ್ಟಿಸಿ ವಲಸೆ ಹೋಗುವುದನ್ನು ತಡೆಗಟ್ಟಲಾಗುವುದು ಎಂದರು. 25 ವರ್ಷಗಳಿಂದ ಅಭಿವೃದ್ಧಿ ಕಾಣದ ತಾಲ್ಲೂಕಿಗೆ ರಾಜ್ಯ ಹಾಗೂ ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಗ್ರಾಮೀಣ ಪ್ರದೇಶದ ರಸ್ತೆಗಳು ಸೇರಿದಂತೆ ಕುಡಿಯುವ ನೀರು, ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದರು. ರಾಜಕಾರಣ ಮಾಡುವುದೊಂದೆ ಮುಖ್ಯವಲ್ಲ, ಅಧಿಕಾರವಿದ್ದ ಸಂದರ್ಭದಲ್ಲಿ ಉತ್ತಮವಾಗಿ, ಪ್ರಮಾಣಿಕವಾಗಿ ಜನರ ಸೇವೆ ಮಾಡಬೇಕು, ರಾಜಕಾರಣ ಮಾಡುವುದಾದರೆ ಸಮಾನರೊಂದಿಗೆ ಮಾಡುತ್ತೇನೆ, ಯಡಿಯೂರಪ್ಪನವರನ್ನು ಜೈಲಿಗೆ ಕಳಿಸಿದ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮನ್ನು ಜೈಲಿಗೆ ಕಳಿಸುತ್ತೇನೆಂದು ಹೇಳುತ್ತಿದ್ದಾರೆ, ಅದಕ್ಕೆ ತಾವು ಸಿದ್ಧರಿರುವುದಾಗ ಇಲ್ಲಿನ ಸಭೆಯಲ್ಲೂ ಪುನರುಚ್ಚರಿಸುತ್ತೇನೆ. ಕಸಬಾ  ಹೋಬಳಿ ಹೊರಳ್‌ಗಲ್ ಗ್ರಾಮದಲ್ಲಿ ಆಯುರ್ವೇದಿಕ್ ಆಸ್ಪತ್ರೆಯ ಶಂಕುಸ್ಥಾಪನೆ, ಕಾಳೇಗೌಡನದೊಡ್ಡಿ ಗ್ರಾಮದಿಂದ ಹೊರಳಗಲ್ ಮಾರ್ಗವಾಗಿ ಹುಲಿಬೆಲೆಯವರೆಗೂ 3.99 ಕೋಟಿ ವೆಚ್ಚ ರಸ್ತೆ ಅಭಿವೃದ್ಧಿ ಕಾಮಗಾರಿಗೆ, ಸಾತನೂರು-ಚನ್ನಪಟ್ಟಣ ರಸ್ತೆ ಅಭಿವೃದ್ಧಿ, ಸಾತನೂರು-ದೊಡ್ಡ ಆಲಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.  ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಡಿ.ವಿಜಯದೇವು, ಕೆ.ಎನ್.ದಿಲೀಪ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾಸುರೇಶ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಾದೇವಿ, ಸದಸ್ಯರಾದ ವೆಂಕಟೇಶ್, ನಳಿನಾರವಿಶಂಕರ್, ಗೌರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಎಂ.ಪುರುಷೋತ್ತಮ್, ರವಿಕುಮಾರ್, ಪ್ರಕಾಶ್, ರಂಗಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷ ಎಸ್.ಡಿ.ಚಂದ್ರಶೇಖರ್, ಮುಖಂಡರುಗಳಾದ ಸೂರ‌್ನಳ್ಳಿ ಜೈರಾಮು, ಬಸಪ್ಪ, ಕೆ.ಎಂ. ರಾಜೇಂದ್ರ, ಬೂಹಳ್ಳಿ ಉಮೇಶ್, ಕೆಂಪರಾಜು, ಪುಟ್ಟಮಾದು, ನಾಗರಾಜು, ರೇಷ್ಮೆ ಉಪನಿರ್ದೇಶಕ ಚಂದ್ರಶೇಖರಪ್ಪ, ವಿಜ್ಞಾನಿ ಡಾ.ಸುಬ್ರಮಣ್ಯ, ಸಹಾಯಕ ನಿರ್ದೇಶಕ ಪ್ರಕಾಶ್, ಎಸ್.ಸಿ.ಒ. ಸಿದ್ದರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry