ರೈತರ ಸಾತ್ವಿಕ ಪ್ರತಿಭಟನೆ

7

ರೈತರ ಸಾತ್ವಿಕ ಪ್ರತಿಭಟನೆ

Published:
Updated:

 ಚಿತ್ರದುರ್ಗ ಜಿಲ್ಲೆಯ ಬಿ.ದುರ್ಗ ಹೋಬಳಿಯ ಚಿಕ್ಕಜಾಜೂರು, ಅನಂದೂರು, ಚಿಕ್ಕ ಎಮ್ಮಿಗನೂರು, ಕಾಟಯ್ಯನ ಕೆರೆಗಳಲ್ಲಿ ಕಳೆದ ಮೂರು ತಿಂಗಳಿಂದ ರೈತರೇ ಕೆರೆಗಳ ಹೂಳೆತ್ತುವ ಕಾರ್ಯ ಮಾಡುತ್ತಿದ್ದಾರೆ. ವಿಶೇಷ ಎಂದರೆ ಹೂಳೆತ್ತಲು ಸರ್ಕಾರ ಹಣ ನೀಡಿಲ್ಲ. ಸ್ವಂತ ಹಣ ಖರ್ಚು ಮಾಡಿಕೊಂಡು ರೈತರೇ ಹೂಳೆತ್ತುತ್ತಿದ್ದಾರೆ. ನಿತ್ಯ 40-50 ಟ್ರಾಕ್ಟರ್ ಹಾಗೂ 4-5 ಟಿಪ್ಪರ್ ಗಳಲ್ಲಿ ಕೆರೆಯ ಹೂಳು ಮಣ್ಣನ್ನು ತಮ್ಮ ಹೊಲ, ತೋಟಗಳಿಗೆ  ಏರಿಸುತ್ತಿದ್ದಾರೆ.ರೈತರ ಕೆಲಸವನ್ನು ನೋಡಿದರೆ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಇದೆಯೇ ಎಂಬ ಅನುಮಾನ ಬರುತ್ತದೆ. ಸರ್ಕಾರವನ್ನು ನಂಬಿಕೊಂಡು ಕೂರುವುದಕ್ಕಿಂತ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು ಎಂದು ರೈತರು ನಿರ್ಧರಿಸಿರುವುದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಸಕಾಲದಲ್ಲಿ ಜನರ ರಕ್ಷಣೆಗೆ ಬಾರದ ಸರ್ಕಾರಕ್ಕೆ ರೈತರು ತೋರಿಸುವ ಸಾತ್ವಿಕ ಪ್ರತಿಭಟನೆ ಇದು ಎಂದು ಹೇಳಬಹುದು.ರೈತರು ಕೆರೆಯ ಹೂಳೆತ್ತಿದ್ದನ್ನು ಅಧಿಕೃತಗೊಳಿಸಿ ಮಧ್ಯವರ್ತಿಗಳು ಅದಕ್ಕೆ ಹಣ ಪಡೆದುಕೊಳ್ಳುವ ಪ್ರಯತ್ನಗಳು ನಡೆಯುವ ಸಾಧ್ಯತೆ ಇದೆ. ಜಿಲ್ಲಾಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry