ರೈತರ ಸಾಲದ ಮೊತ್ತ ಏರಿಕೆ, ಬಡ್ಡಿ ಶೇಕಡಾ 1 ಇಳಿಕೆ

7

ರೈತರ ಸಾಲದ ಮೊತ್ತ ಏರಿಕೆ, ಬಡ್ಡಿ ಶೇಕಡಾ 1 ಇಳಿಕೆ

Published:
Updated:

ನವದೆಹಲಿ, (ಪಿಟಿಐ): ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅನುಕೂಲವಾಗುವಂತೆ  ಒಟ್ಟು ಸಾಲ ನೀಡಿಕೆ ಮೊತ್ತವನ್ನು ಕಳೆದ ವರ್ಷಕ್ಕಿಂತ ಒಂದು ಲಕ್ಷ ಕೋಟಿ ರೂಪಾಯಿಗಳಷ್ಟು ಏರಿಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ  ನಾಲ್ಕು ಮುಕ್ಕಾಲು ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ಜೊತೆಗೆ ರೈತರ ಸಾಲದ ಮೇಲಿನ ಬಡ್ಡಿಯನ್ನು ಇಳಿಸಲಾಗಿದೆ.

ಕೃಷಿ ಕ್ಷೇತ್ರದ ಸಾಲ ನೀಡಿಕೆಯ ಪ್ರಮಾಣವನ್ನು 1 ಲಕ್ಷ ರೂಪಾಯಿಗಳಷ್ಟು ಏರಿಸಲಾಗಿದ್ದು, ಸರಿಯಾಗಿ ಸಾಲ ಮರುಪಾವತಿ ಮಾಡುವ ರೈತರಿಗೆ ಶೇ 4ರ ದರದ ರಿಯಾಯ್ತಿ ಬಡ್ಡಿ ಘೋಷಿಸಲಾಗಿದೆ. ಬ್ಯಾಂಕ್ ಗಳು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಲ ನೀಡುವಲ್ಲಿ ಹೆಚ್ಚಿನ ಆಸಕ್ತಿ ತಳೆಯುವಂತೆ ಸೂಚಿಸಲಾಗಿದೆ.

ಪ್ರಸ್ತುತ ಬೆಳೆಗಾಗಿ  ಶೇ7 ರ ಪ್ರಮಾಣದಲ್ಲಿ  ಅಲ್ಪಾವಧಿ ಸಾಲ ನೀಡಲಾಗುತ್ತಿದೆ. 

ಸಕಾಲದಲ್ಲಿ ಬೆಳೆಸಾಲ ಮರುಪಾವತಿ ಮಾಡುವ ರೈತರಿಗೆ ಕಳೆದ ಮುಂಗಡಪತ್ರದಲ್ಲಿ ಶೇಕಡಾ 2ರಷ್ಟು ಬಡ್ಡಿ ಸಬ್ಸಿಡಿ ಒದಗಿಸಲಾಗಿತ್ತು. ಈ ರೈತರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಸಲುವಾಗಿ 2011-12ರ ಸಾಲಿನಲ್ಲಿ ಈ ಸಾಲ ಸಬ್ಸಿಡಿಯನ್ನು ಶೇಕಡಾ 3ಕ್ಕೆ ಏರಿಸುವ ಪ್ರಸ್ತಾವ ಇಡುತ್ತಿದ್ದೇನೆ. ಇದರಿಂದಾಗಿ ರೈತರ ಸಾಲದ ಮೇಲಿನ ಬಡ್ಡಿ ದರ ಕೇವಲ ಶೇಕಡಾ 4ರಷ್ಟಾಗುತ್ತದೆ ಎಂದು ಪ್ರಣವ್ ಮುಖರ್ಜಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry