ಬುಧವಾರ, ಜೂನ್ 23, 2021
22 °C

ರೈತರ ಸಾಲ ಮನ್ನಾಕ್ಕೆ ಸಿಎಂಗೆ ಒತ್ತಡ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ವಿದರ್ಭ ಮಾದರಿ ರಾಜ್ಯದ ರೈತರ ₨400ಕೋಟಿ ಸಾಲ­ಮನ್ನಾ ಮಾಡುವ ನಿಟ್ಟಿನಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರುವುದಾಗಿ ಶಾಸಕ ರಾಜಶೇಖರ ಬಿ.ಪಾಟೀಲ ಹೇಳಿದರು.ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 9ರ ಆರ್‌.ಟಿ.ಒ ಚೆಕ್‌ಪೊಸ್ಟ್‌ ಬಳಿ ರಾಜ್ಯ ರೈತ ಸಂಘ ಮಂಗಳವಾರ ನಡೆಸಿದ ರಸ್ತೆತಡೆ ಪ್ರತಿಭಟನೆ ವೇಳೆ ರೈತರ ಬೇಡಿಕೆಗೆ ಸ್ಪಂದಿಸಿ, ಅವರು ಈ ವಿಷಯ ಪ್ರಸ್ತಾಪಿಸಿದರು.ಸರ್ಕಾರ ನಿಗದಿ ಪಡಿಸಿದ ₨2500 ಪಾವತಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕನಾದರೂ ರೈತರ ಸಮಸ್ಯೆ ಪರಿಹರಿಸುವ ವಿಷಯದಲ್ಲಿ ಸರ್ಕಾರದ ಮೇಲೆ ಪಕ್ಷಾತೀತ ಒತ್ತಡ ಹೇರುವು­ದಾಗಿ ತಿಳಿಸಿದರು.ಜಿಲ್ಲೆಯ ಮೂರು ಕಾರ್ಖಾನೆಗಳ ಆಡಳಿತ ಮಂಡಳಿಗಳು ಚುನಾಯಿತ ಪ್ರತಿನಿಧಿಗಳ ಕೈಯಲ್ಲಿ ಇರಬಹುದು. ಆದರೇ ಹುಮನಾಬಾದ್‌ ಪಾಟೀಲ ಪರಿವಾರ ಜಿಲ್ಲೆಯ ಯಾವುದೇ ಸಹ­ಕಾರ ಸಕ್ಕರೆ ಕಾರ್ಖಾನೆಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿಲ್ಲ. ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ, ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಗಳು ₨1800 ಕೊಡುವ ವಿಷಯಕ್ಕೆ ಸಂಬಂಧಪಟ್ಟಂತೆ ಸಕಾರಾ­ತ್ಮಕ ಸಂದಿರುವಾಗ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಮಾತ್ರ ನಕಾರಾತ್ಮಕ ಪ್ರತಿಕ್ರಿಯಿ­ಸುತ್ತಿರುವುದು ಸರಿಯಲ್ಲ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಖಾನೆ ಆಡಳಿತ ಮಂಡಳಿ­ಗಳ ಪ್ರತಿ ಟನ್‌ ಕಬ್ಬಿಗೆ ₨2500 ಪಾವತಿಸುವ ವಿಷಯ ಸದ­ನದಲ್ಲಿ ಪ್ರಸ್ತಾಪಿಸಿದಾಗ ಅಧಿಕಾರದಲ್ಲಿ ಇರುವ ಹಾಗೂ ವಿರೋಧ ಪಕ್ಷದ ಶಾಸಕ ಸಚಿವರು ವಿರೋಧ ವ್ಯಕ್ತಪಡಿ­ಸಿದ್ದಕ್ಕೆ ಶಾಸಕ ಪಾಟೀಲ ಈ ಸಂದಭರ್ದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.₨1800 ಕೊಡಿಸಲು ಪ್ರಯತ್ನ

‘ಪ್ರತಿ ಟನ್ ಕಬ್ಬಿಗೆ ₨1800 ಕೊಡಿಸಲು ಪ್ರಾಮಾಣಿಕ­ವಾಗಿ ಪ್ರಯತ್ನಿಸುವುದಾಗಿ ಜಿಲ್ಲಾಧಿ­ಕಾರಿ ಡಾ.ಪಿ.ಸಿ.ಜಾಫರ್‌ ಹೇಳಿದರು.ರೈತರು ಪ್ರತಿ ಟನ್‌ ಕಬ್ಬಿಗೆ ₨2650 ಬೇಡಿಕೆ ಇಟ್ಟಿದ್ದನ್ನು ಗಮನದಲ್ಲಿಟ್ಟು­ಕೊಂಡು ಸರ್ಕಾರ  ಕಬ್ಬು ಬೆಲೆ ನಿಗದಿ ಸಮಿತಿ ರಚಿಸಿತ್ತು. ಸಮಿತಿ ನೀಡಿದ ವೈಜ್ಞಾನಿಕ ವರದಿ ಆಧರಿಸಿ ಪ್ರತಿ ಟನ್‌ಗೆ ₨2,500 ಪಾವತಿಸುವಂತೆ ರಾಜ್ಯದ ಸಹಕಾರ ಸಕ್ಕರೆ ಕಾರ್ಖಾನೆ­ಗಳಿಗೆ ಆದೇಶಿಸಿತ್ತು. ಆದರೆ, ಕಾರ್ಖಾನೆ ಆಡಳಿತ ಮಂಡಳಿಯವರು ಈ ಬೆಲೆ ನೀಡುವುದು ಅಸಾಧ್ಯ ಎಂದು ಹೇಳಿ­ಕೊಂಡು ತಡೆಯಾಜ್ಞೆ ತಂದಿದೆ. ಈ ವಿಷಯ ಕೋರ್ಟ್‌­ನಲ್ಲಿರುವ ಕಾರಣ ಸರ್ಕಾರ ನಿಗದಿಪಡಿಸಿದ ಬೆಲೆ ಕುರಿತು ಘೋಷಣೆ ಮಾಡುವುದಕ್ಕೆ ಯಾರೊಬ್ಬ­ರಿಗೂ ಕಾನೂನು ಪ್ರಕಾರ ಹಕ್ಕಿಲ್ಲ.₨1800 ಕೊಡಿಸುವ ನಿಟ್ಟಿನಲ್ಲಿ ಈಗಾಗಲೇ ಎಂಜಿಎಸ್‌ಎಸ್‌ಕೆ ಹಾಗೂ ಎನ್‌ಎಸ್‌ಎಸ್‌ಕೆ ಕಾರ್ಖಾನೆಗಳ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಬಿ.ಎಸ್‌.ಎಸ್‌.ಕೆ ಈ ವಿಷಯದಲ್ಲಿ ಕೊಂಚ ಹಿಂದೇಟು ಹಾಕುತ್ತಿದೆ. ವಿಷಯವನ್ನು ಸಂಸದ ಎನ್‌.ಧರ್ಮಸಿಂಗ್‌ ಗಮನಕ್ಕೆ ತರಲಾ­ಗಿದೆ. ಒಂದೆರಡು ದಿನಗಳಲ್ಲಿ ಜಿಲ್ಲೆ ಮೂರು ಸಹಕಾರ ಸಕ್ಕರೆ ಆಡಳಿತ ಮಂಡಳಿ ಸಭೆ ಕರೆದು ಚರ್ಚಿಸಿ, ಬೆಲೆ ನಿಗದಿ ಬಗ್ಗೆ ತೆಗೆದುಕೊಳ್ಳುವ ನಿರ್ಧರ ಪ್ರಕಟಿಸುವುದಾಗಿ ತಿಳಿಸಿದರು.ಚುನಾವಣೆ ಸಮೀಪಸುತ್ತಿದೆ. ಬೆಲೆ ನಿಗದಿ ಬಗ್ಗೆ ಸರ್ಕಾರ ಯಾವುದಾ­ದರೂ ನಿರ್ಧಾರ ತೆಗೆದುಕೊಳ್ಳದಿದ್ದರೇ ಎದುರಾಗಬಹುದಾದ ಪರಿಣಾಮಗಳ ಬಗ್ಗೆಯೂ ಸರ್ಕಾರಕ್ಕೆ ಮನ­ವರಿಕೆ ಮಾಡಿಕೊಡುವುದಾಗಿ ತಿಳಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಅವರು ಜಿಲ್ಲೆಯ ರೈತ ಸಂಘದ ಪದಾಧಿ­ಕಾರಿ­ಗಳ ಸಮ್ಮತಿ ಪಡೆದು ಮೂರ್ನಾಲ್ಕು ದಿನಗಳ  ಅವಧಿಗಾಗಿ ಪ್ರತಿಭಟನೆ­ಯನ್ನು ತಾತ್ಕಾಲಿಕ ಹಿಂದಕ್ಕೆ ಪಡೆಯು­ವುತ್ತಿರುವ ವಿಷಯ ಘೋಷಿಸಿದರು.ಸಹಾ­ಯಕ ಆಯುಕ್ತೆ ಹೆಬ್ಸಿಬಾರಾಣಿ ಕುರ್ಲಾ­­ಪಾಟಿ, ತಹಶೀಲ್ದಾರ ತಿಪ್ಪಣ್ಣ ಸಾಲಿವಾಲೆ ಇದ್ದರು. ಡಿವೈಎಸ್ಪಿ ಅಮರ­ನಾಥ­ರೆಡ್ಡಿ ನೇತೃತ್ವದಲ್ಲಿ ಬಿಗಿ ಬಂದೊಬಸ್ತ್‌ ಕಲ್ಪಿಸಲಾಗಿತ್ತು.ಸಂಘದ ರಾಜ್ಯ ಘಟಕ ಗೌರ­ವಾಧ್ಯಕ್ಷ ಸೋಮಬುದ್ದು ರಂಗಸ್ವಾಮಿ, ಕಾರ್ಯಾಧ್ಯಕ್ಷ ಕೆ.ಟಿ.ಗಂಗಾಧರ, ಜಿಲ್ಲಾ ಘಟಕ ಅಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ, ಮೈನೋದ್ದೀನ್‌ ಲಾಡ್ಜಿ, ತಾಲ್ಲೂಕು ಘಟಕ ಅಧ್ಯಕ್ಷ ಸತೀಶ ನನ್ನೂರೆ, ಗುರುಲಿಂಗಪ್ಪ ಮೇಲ್ದೊಡ್ಡಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು ಎತ್ತುಬಂಡಿ ಸಮೇತ ಪ್ರತಿಭಟನೆಯಲ್ಲಿ ಪಾಲ್ಗೊಂಡಿ­ದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.