ರೈತರ ಹೋರಾಟಕ್ಕೆ ಬೆಂಬಲ

7

ರೈತರ ಹೋರಾಟಕ್ಕೆ ಬೆಂಬಲ

Published:
Updated:

ತರೀಕೆರೆ: ಕಳೆದ ಶುಕ್ರವಾರದಿಂದ ಇಲ್ಲಿನ ಮಿನಿ ವಿಧಾನಸೌಧದ ಮುಂದೆ ತಾಲ್ಲೂ ಕಿಗೆ ಸಮಗ್ರ ಮತ್ತು ಶಾಶ್ವತ ನೀರಾವರಿ ಯೋಜನೆಯನ್ನು ಕಲ್ಪಿಸುವಂತೆ ಒತ್ತಾ ಯಿಸಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ನಡೆಸುತ್ತಿರುವ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದ ರೈತರಿಗೆ ಮಿನಿ ವಿಧಾನಸೌಧದ ಆವರಣದಲ್ಲಿ ಗುರುವಾರ ರೈತರೇ ಅಡುಗೆ ಮಾಡಿ  ಬಡಿಸಿದರು.ರೈತರ ಹೋರಾಟಕ್ಕೆ ವಿವಿಧ ಸಂಘ, ಸಂಸ್ಥೆ ಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನಾ ಕಾ ರರಿಗೆ ಆಹಾರ ಪದಾರ್ಥ ನೀಡಿ ಸಹಕರಿಸಿದರು.ಪ್ರತಿಭಟನಾ ನಿರತ ರೈತರನ್ನು ಗುರುವಾರ ಭೇಟಿ ಮಾಡಿದ್ದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರೈತರ ಹೋರಾಟಕ್ಕೆ ಜಯ ಸಿಗುತ್ತದೆ. ರೈತರಿಗೆ, ಜನ ಜಾನುವಾರುಗಳಿಗೆ ಯಾವ ರೀತಿಯ ಪರಿಹಾರ ಕೈಗೊಂಡಿದೆ ಎಂಬುದನ್ನು ಸರ್ಕಾರ ರೈತರಿಗೆ ತಿಳಿಸುವಂತೆ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿದರು.ರೈತರ ಮನವಿಗೆ ಉತ್ತರಿಸಿದ ಉಪ ವಿಭಾಗಾಧಿಕಾರಿ ಅನುರಾಧಾ, ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಸಮಾಲೋಚಿಸಿ ಅಧಿಕಾರಿಗಳು ಮತ್ತು ರೈತ ಮುಖಂಡರ ಸಮಾಲೋಚನಾ ಸಭೆಯ ದಿನಾಂಕವನ್ನು ನಿಗದಿ ಪಡಿಸುವುದಾಗಿ ತಿಳಿದರು.ರೈತ ಮುಖಂಡರಾದ ಪುಟ್ಟಮಲ್ಲಪ್ಪ, ಈಶ್ವರಪ್ಪ, ಸುರೇಶ್, ಸೋಮಶೇಖರ್, ಪರಮೇಶ್ವರಪ್ಪ, ಜಯಣ್ಣ, ಸದಾಶಿವಯ್ಯ ಮತ್ತು ಹಾಲೇಶಪ್ಪ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry