ಸೋಮವಾರ, ಜನವರಿ 20, 2020
18 °C

ರೈತ ಆತ್ಮಹತ್ಯೆ; ₨1ಲಕ್ಷ ಪರಿಹಾರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ಸಾಲದ ಬಾಧೆ ತಾಳಲಾರದೇ  2012ರ  ಅಕ್ಟೋಬರ್ 13 ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಿಂದಗಿ ತಾಲ್ಲೂಕಿನ ಶಿರಸಗಿ ಗ್ರಾಮದ ನಾಗಪ್ಪ ಹಣಮಂತ ವಡ್ಡರ ಅವರ ಕುಟುಂಬಕ್ಕೆ ಸರ್ಕಾರದ ಪರಿಹಾರ ಹಣ ಒಂದು ಲಕ್ಷ ರೂಪಾಯಿ ಚೆಕ್‌ಅನ್ನು ಶಾಸಕ ರಮೇಶ ಭೂಸನೂರ ಸೋಮವಾರ ವಿತರಿಸಿದರು.ತಾಲ್ಲೂಕಿನ ಶಿರಸಗಿ ಗ್ರಾಮಕ್ಕೆ ತೆರಳಿದ ಶಾಸಕರು ನೇರವಾಗಿ ಮೃತ ರೈತನ ಮನೆಗೆ ಹೋಗಿ ಪರಿಹಾರದ ಚೆಕ್ ನ್ನು ಮೃತ ರೈತನ ಪತ್ನಿ ಶರಣಮ್ಮ ನಾಗಪ್ಪ ವಡ್ಡರ ಅವರಿಗೆ ವಿತರಿಸಿ ಕಳೆದ ವರ್ಷ ರೈತ ಸಾಲದ ಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ ಅಂದು ಈ ತಾವು ವೈಯಕ್ತಿಕವಾಗಿ ರೈತನ ಕುಟುಂಬಕ್ಕೆ ₨10,000 ಸಹಾಯ ಧನ ನೀಡಿದ್ದೆ.

ಈಗ ಸರ್ಕಾರದಿಂದ ಒಂದು ಲಕ್ಷ ರೂಪಾಯಿ ಪರಿಹಾರ ಬಂದಿದೆ. ಈ ಹಣವನ್ನು ಭವಿಷ್ಯಕ್ಕಾಗಿ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.ಕೃಷಿ ಸಹಾಯಕ ನಿರ್ದೇಶಕ ಎಚ್.ವೈ.ಸಿಂಗೆಗೋಳ, ಜಿ.ಪಂ. ಸದಸ್ಯ ಯಲ್ಲಪ್ಪ ಹಾದಿಮನಿ, ಶಿವಣ್ಣ ಪದಮಾ, ಸಿದ್ದಣ್ಣ ಇಂಗಳಗಿ, ಭೀಮರಾಯ ನೆಲೋಗಿ, ನರಸಪ್ಪ ಗೌಂಡಿ, ಯಲ್ಲಪ್ಪ ಗೌಂಡಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)