ರೈತ ಆತ್ಮಹತ್ಯೆ

7

ರೈತ ಆತ್ಮಹತ್ಯೆ

Published:
Updated:

ದಾವಣಗೆರೆ: ಬೆಳೆ ನಷ್ಟ ಹಾಗೂ ಸಾಲ ಬಾಧೆಯಿಂದ ಮನನೊಂದು ತಾಲ್ಲೂಕಿನಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ 3 ದಿನಗಳ ಬೆನ್ನಲ್ಲೇ ಇಂಥದ್ದೇ ಕಾರಣದಿಂದ ಮತ್ತೊಬ್ಬ ರೈತ ಶುಕ್ರವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.ತಾಲ್ಲೂಕಿನ ತೊಳಹುಣಸೆಯ ಕೃಷ್ಣನಾಯ್ಕ(60) ಆತ್ಮಹತ್ಯೆ ಮಾಡಿಕೊಂಡವರು. ಅವರು 2 ಎಕರೆ 3 ಗುಂಟೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಅದಕ್ಕಾಗಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಲ್ಲಿ ರೂ.80 ಸಾವಿರ ಸಾಲ ಪಡೆದಿದ್ದರು. ಜ. 8ರಂದು ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಬೆಳೆ ನಷ್ಟವಾಗಿತ್ತು.

 

ಇದರಿಂದ ಮನನೊಂದು ಶುಕ್ರವಾರ ಬೆಳಗಿನ ಜಾವ ಕ್ರಿಮಿನಾಶಕ ಸೇವಿಸಿದ್ದರು. ಅಸ್ವಸ್ಥಗೊಂಡವರನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry