ಸೋಮವಾರ, ನವೆಂಬರ್ 18, 2019
27 °C

ರೈತ ಪರ ಸರ್ಕಾರಕ್ಕೆ ಶ್ರಮಿಸಲು ಸಲಹೆ

Published:
Updated:

ನರಗುಂದ: ರಾಷ್ಟ್ರೀಯ ಪಕ್ಷಗಳನ್ನು ಇದುವರೆಗೆ ನಂಬಿ, ಭ್ರಮನಿರಸಗೊಂಡಿರುವ ಜನತೆ ಈ ಬಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಆದ್ದರಿಂದ ಎಲ್ಲ ಮತದಾರರು ರೈತ ಪರ ಸರಕಾರಕ್ಕಾಗಿ ಜೆಡಿಎಸ್ ಬೆಂಬಲಿಸುವಂತೆ ಜೆಡಿಎಸ್ ಅಭ್ಯರ್ಥಿ ಪ್ರಕಾಶ ಕರಿ ಮನವಿ  ಮಾಡಿದರು.ಸ್ಥಳೀಯ ಮಾರುತಿ ನಗರದಲ್ಲಿ  ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜೆಡಿಎಸ್ ರಾಜ್ಯದ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು.    ಈ ಸಂದರ್ಭದಲ್ಲಿ ಹನಮಂತಗೌಡ ಕಲ್ಮನಿ,  ಎಂ ಹೆಚ್ ಚಳ್ಳಮರದಶೇಖ, ಎಂ ಎಸ್ ಪರ್ವತಗೌಡ್ರ, ವಿದ್ಯಾರ್ಥಿ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುರಾಜಗೌಡ ವಿ. ಪಾಟೀಲ, ಗದಗ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗೇಶ ಕೋಣನವರ, ಗ್ರಾಮೀಣ ಘಟಕದ ಅಧ್ಯಕ್ಷ ರಮೇಶ ಭಾವಿ, ಸಂಘಟನಾ ಕಾರ್ಯದರ್ಶಿ ಮಲ್ಲು ಗೊಲ್ಲರ, ಮುದುಕಪ್ಪ ನಾಯ್ಕರ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)