ಬುಧವಾರ, ನವೆಂಬರ್ 13, 2019
21 °C

`ರೈತ ಸಂಘದಿಂದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ'

Published:
Updated:

ಸಿದ್ದಾಪುರ:  `ವಿಧಾನಸಭಾ ಚುನಾ ವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲೆಯ ಎಲ್ಲ ಆರು ಕ್ಷೇತ್ರಗಳಲ್ಲಿಯೂ ಕಣಕ್ಕಿಳಿ ಯಲಿದೆ' ಎಂದು ಜಿಲ್ಲಾ ಘಟಕದ  ಅಧ್ಯಕ್ಷ ಸದಾಶಿವ ಹೆಗಡೆ ನರ್ಸಗಲ್ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ಯಲ್ಲಾಪುರ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿಯ ಆಯ್ಕೆ ಆಗಿದ್ದು, ಉಮಾಕಾಂತ  ನಮ್ಮ ಅಭ್ಯರ್ಥಿ ಯಾಗಿದ್ದಾರೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸದ್ಯದಲ್ಲಿಯೆ ನಡೆಯಲಿದೆ' ಎಂದರು.`ನಾವು ರೈತರ ಖಾತೆ ಸಾಲ ಮನ್ನಾ ಮತ್ತಿತರ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಹಲವಾರು ತಿಂಗಳು ಗಳಿಂದ  ಹೋರಾಟ ನಡೆಸುತ್ತಾ ಬಂದಿದ್ದೇವೆ.  ಜಿಲ್ಲಾ ಉಸ್ತು ವಾರಿ ಸಚಿವರು ನಿರ್ಲಕ್ಷ್ಯ ತೋರಿಸಿದರು. ಮುಖ್ಯಮಂತ್ರಿಗಳ ಗಮನಕ್ಕೆ ಈ ವಿಷಯ ತಂದಿದ್ದರೂ ಪ್ರಯೋಜನ ಆಗಿಲ್ಲ. ಆದ್ದರಿಂದ ನಾವು ಚುನಾವಣಾ ಕಣಕ್ಕೆ ಇಳಿಯುವುದಕ್ಕೆ ನಿರ್ಧರಿಸಿದ್ದೇವೆ. ಒಂದೊಮ್ಮೆ ಜಿಲ್ಲೆಯ ಯಾವುದೇ ಕ್ಷೇತ್ರ ದಲ್ಲಿ  ಸರಿಯಾದ ಅಭ್ಯರ್ಥಿ ಸಿಗದಿದ್ದರೆ, ರೈತ ಪರವಾದ ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸುವು ದಾಗಿ ಪ್ರಮಾಣ ಮಾಡುವ ಅಭ್ಯರ್ಥಿ ಗಳಿಗೆ ಬೆಂಬಲ ನೀಡುತ್ತೇವೆ' ಎಂದರು.`ನಮ್ಮ ಜಿಲ್ಲೆಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಅಡಿಕೆ ಅಭಿವೃದ್ಧಿಗೆ  ವಿಶೇಷ ಪ್ಯಾಕೇಜ್,  ವೆನಿಲ್ಲಾ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ,  ರೈತರ ಕೃಷಿ ಭೂಮಿ ಮತ್ತು ಬೆಳೆ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು. ಹಾಗೂ ಜಿಲ್ಲೆಯ ರೈತರ ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿ,  ಶೇ.25ರಷ್ಟು ಬೆಳೆಹಾನಿಯಾದರೂ ಅದಕ್ಕೆ  ಯೋಗ್ಯ ಪರಿಹಾರ ನೀಡಿ,  ಮೀನುಗಾರರು, ರೈತರು, ಕೂಲಿಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಕನಿಷ್ಠ  ರೂ. 5ಲಕ್ಷ ಅಪಘಾತ ನಿಧಿ ಸಿಗಬೇಕು ಹೀಗೆ ಒಟ್ಟು 35 ಬೇಡಿಕೆಗಳನ್ನು ನಾವು ಮಂಡಿಸಿದ್ದೇವೆ' ಈ ಬೇಡಿಕೆಳನ್ನು ಈಡೇರಿಸುವ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯ ದರ್ಶಿ ಶಂಭಣ್ಣ ಕೊಳೂರು, ತಾಲ್ಲೂಕು ಘಟಕದ ಸಂಚಾಲಕ ಪಿ.ವಿ.ಹೆಗಡೆ ಹೊಸಗದ್ದೆ, ಜಿ.ಎಂ. ಹೆಗಡೆ, ಮಂಜು ನಾಥ ಹೆಗಡೆ, ಲಕ್ಷ್ಮಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)