ಶನಿವಾರ, ಜೂನ್ 19, 2021
26 °C

ರೈತ ಸಂಘ ರಾಜ್ಯ ಸಮಿತಿ ಸಭೆ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಚಿತ್ರದುರ್ಗದ ಮುರುಘಾ ಶರಣರ ಸಮ್ಮುಖದಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರಾಗಿರುವ ಪುಟ್ಟಣ್ಣಯ್ಯ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಅವರನ್ನು ದೂರವಿಟ್ಟು ಪ್ರತ್ಯೇಕ ಸಂಘಟನೆ ಸಂಘಟಿಸುವ ಉದ್ದೇಶದಿಂದ ಇದೇ 5 ರಂದು ರಾಜ್ಯ ಸಮಿತಿ ಸಭೆಯನ್ನು ಹಾವೇರಿ ನಗರದಲ್ಲಿ ಕರೆಯಲಾಗಿದೆ~ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಿವಾನಂದ ಗುರುಮಠ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ನಂಜುಂಡಸ್ವಾಮಿ ನಿಧನದ ನಂತರ ಸಂಘದ ನೇತೃತ್ವ ವಹಿಸಿದ್ದ ಬೆಳಗಾವಿಯ ಸುರೇಶಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಮುರುಘರಾಜೇಂದ್ರ ಮಠದಲ್ಲಿ ಸಭೆ ನಡೆಯಲಿದೆ ಎಂದರು.ಸಂಘದ ಹಿರಿಯ ಮುಖಂಡರಾದ ಬಾಬಾಗೌಡ ಪಾಟೀಲ, ಮೊಕಾಸಿ, ಕೆ.ಟಿ.ಗಂಗಾಧರ್ ಮತ್ತು  ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.ಅಧಿಕೃತವಲ್ಲ: ಚಿತ್ರದುರ್ಗದ ಶರಣರ ಸಮ್ಮುಖದಲ್ಲಿ ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಸಭೆಯಾಗಲಿ, ಅಲ್ಲಿ ಆಯ್ಕೆ ಮಾಡಿದ ಪದಾಧಿಕಾರಿಗಳಾಗಲಿ ಯಾರೂ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಅಧಿಕೃತವಾಗಿ ಸೇರಿದವರಲ್ಲ.

ಈಗ ನೇಮಕವಾದ ಮುಖಂಡರು ರೈತ ಸಂಘದ ಸೈದ್ಧಾಂತಿಕ ನೆಲೆಯಿಂದ ದೂರ ಸರಿದವರಾಗಿದ್ದಾರೆ ಎಂದು ಆರೋಪಿಸಿದರು.ರೈತ ಸಂಘಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪದಾಧಿಕಾರಿಗಳಿದ್ದಾರೆ. ಅದು ಅಲ್ಲದೇ ರಾಜ್ಯ ಸಮಿತಿಯೊಂದು ಕಾರ್ಯ ನಿರ್ವಹಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಇರುವುದರಿಂದ ಸಮಿತಿ ಸಭೆ ಕರೆದು ಪದಾಧಿಕಾರಿಗಳ ಆಯ್ಕೆ ಮಾಡಬೇಕು.ಆದರೆ ಚಿತ್ರದುರ್ಗದಲ್ಲಿ ಯಾವುದೇ ಪ್ರಕ್ರಿಯೆ ನಡೆಸದ ಕಾರಣ ಅಲ್ಲಿನ ಯಾವ ನೇಮಕಕ್ಕೂ ಮಾನ್ಯತೆ ಇರುವುದಿಲ್ಲ ಎಂದರು.ಮಾ.5 ರಂದು ನಡೆಯುವ ಸಭೆಯಲ್ಲಿ ಈಗಿರುವ ಎರಡು ಗಂಪುಗಳಿಗೆ ಪರ್ಯಾಯವಾಗಿ ಮತ್ತೊಂದು ಗುಂಪು ತಲೆ ಎತ್ತುವ ನಿರ್ಧಾರ ಹೊರಬಿದ್ದರೂ ಆಶ್ಚರ್ಯ ಪಡುವಂತಿಲ್ಲ ಎಂದು ಶಿವಾನಂದ ಗುರುಮಠ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.