ಶನಿವಾರ, ಜನವರಿ 18, 2020
20 °C
ಮಹಾದಾಯಿ ಯೋಜನೆ ಜಾರಿಗೆ ಆಗ್ರಹ

ರೈತ ಸೇನಾದಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಮಹಾದಾಯಿ ಯೋಜನೆ ಜಾರಿ  ಮಾಡುವಲ್ಲಿ ಸರಕಾರಗಳು ಅನುಸರಿಸುತ್ತಿರುವ ವಿಳಂಬ ನೀತಿ  ಖಂಡಿಸಿ  ಹಾಗೂ ಕೂಡಲೇ ಮಲಪ್ರಭೆಗೆ  ಮಹಾದಾಯಿ ನದಿ ಜೋಡಿಸಿ  ಕರ್ನಾಟಕದ ನೀರನ್ನು ಹಂಚಿಕೆ ಮಾಡುವಂತೆ ಆಗ್ರಹಿಸಿ  ಪಟ್ಟಣದಲ್ಲಿ ರೈತಸೇನಾ, ರೈತ ಸಂಘದ ತಾಲ್ಲೂಕು ಘಟಕದ ಸದಸ್ಯರು ಸೇರಿದಂತೆ  ವಿದ್ಯಾರ್ಥಿ ಸಂಘಟನೆ, ಕನ್ನಡ ಪರ ಸಂಘಟನೆಗಳ ಸದಸ್ಯರು    ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಗೆ ಮನವಿ ಸಲ್ಲಿಸಿದರು.ಪುರಸಭೆ ಆವರಣದಿಂದ ಹೊರಟ ಪ್ರತಿಭಟನಾ  ಮೆರವಣಿಗೆ  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಸಂತೆ ದಿನವಾಗಿದ್ದರಿಂದ ಈ ಪ್ರತಿಭಟನೆಯಿಂದ  ಕೆಲಕಾಲ ಅತಿಯಾದ ಜನದಟ್ಟನೆ ಕಂಡು ಬಂದು ಗ್ರಾಹಕರಿಗೆ ತೊಂದರೆ ಉಂಟಾಯಿತು. ನಂತರ ಪ್ರತಿಭಟನಕಾರಾರು ಬಸ್‌ ನಿಲ್ದಾಣದ ಬಳಿಯ ಶಿವಾಜಿವೃತ್ತದ ಬಳಿ ಬೀಡು ಬಿಟ್ಟು ರಸ್ತೆ ತಡೆ ನಡೆಸಿದರು. ಇದರಿಂದ ಕೆಲ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತು. ಪ್ರಯಾಣಿಕರು ಪರದಾಡಬೇಕಾಯಿತು.ಈ ಸಂದರ್ಭದಲ್ಲಿ  ಮಾತನಾಡಿದ ರೈತ ಸೇನಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಅಂಬಲಿ ಮಾತನಾಡಿ ಮಹಾದಾಯಿ ಕುರಿತಂತೆ  ನ್ಯಾಯಮಂಡಳಿ ರಚನೆಯಾಗಿದೆ. ಈಗ ಮಲಪ್ರಭಾ ಅಚ್ಚುಕಟ್ಟು ಪ್ರದೇಶಕ್ಕೆ  ಭೇಟಿ ನೀಡುತ್ತಿದೆ. ಅದರ ನ್ಯಾಯಾಧೀಶರು ವಾಸ್ತವ ಸ್ಥಿತಿಯನ್ನು  ತಿಳಿಯಬೇಕಿದೆ. ಕೂಡಲೇ ಮಹಾದಾಯಿ ಯೋಜನೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕರ್ನಾಟಕದ ನೀರಿನ ಪಾಲನ್ನು ಹಂಚಿಕೆ ಮಾಡಿಕೊಡುವಲ್ಲಿ ಸರಕಾರ ಗಮನಹರಿಸಬೇಕು. ಇಲ್ಲ ವಾದರೆ ಸರಕಾರದ ವಿರುದ್ಧ  ಹೋರಾಟ ಕೈಗೊಳ್ಳವುದಾಗಿ ಎಚ್ಚರಿಸಿದರು.ರೈತ ಸೇನಾ ತಾಲ್ಲೂಕು ಘಟಕದ ಅಧ್ಯಕ್ಷ ಶರಣಪ್ಪಗೌಡ ಪಾಟೀಲ ಕಳೆದ ನಲವತ್ತು ವರ್ಷಗಳಿಂದ ಮಲಪ್ರಭೆ ಕಾಲುವೆ ನಂಬಿಕೊಂಡು ಜೀವನ ನಡೆಸು ತ್ತಿದ್ದೇವೆ. ಆದರೆ ನಮ್ಮ ಬೇಡಿಕೆಗಳೂ ಮಾತ್ರ  ಈಡೇರಿಲ್ಲ ಎಂದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ಸಾಬಳೆ ಮಾತಾಡಿ  ನೀರಾವರಿ ಯೋಜನೆಗಳ ಬಗ್ಗೆ ಸರಕಾರಗಳ ತೋರುತ್ತಿರುವ ನಿರ್ಲಕ್ಷ ವನ್ನು  ಖಂಡಿಸಿದರು.ಪ್ರತಿಭಟನೆಯಲ್ಲಿ ರೈತಸೇನಾದ ಮಂಜುನಾಥ  ಬ್ಯಾಹಟ್ಟಿ, ಸಿ.ಎಸ್‌. ಅಂಬಲಿ, ನವೀನಕುಮಾರ ಹೆಬ್ಬಳ್ಳಿ, ಶಿವಾನಂದ ಬನಪ್ಪನವರ, ರಾಜು ಬನಪ್ಪನವರ, ಶಿವಪ್ಪ ಹೂಗಾರ, ಸಂತೋಷ ಬಾಬರ, ಪ್ರವೀಣ ಜಕರಡ್ಡಿ, ಶಿವಯ್ಯ ಪೂಜಾರ,  ಕರವೇ ತಾಲ್ಲೂಕು ಅಧ್ಯಕ್ಷ ಹನಮಂತ ಮಜ್ಜಗುಡ್ಡ, ವಾಸು ಹೆಬ್ಬಾಳ, ರವಿ ಚಿಂತಾಲ, ರೈತ ಸಂಘದ ಬುಡ್ನೆ ಸಾಬ ಮಿಯಾಖಾನವರ, ಉಮೇಶ ಲದ್ದಿ ಹಾಗೂ ವಿದ್ಯಾರ್ಥಿಗಳ ಸಂಘಟನೆಗಳ ಸದಸ್ಯರು ಸೇರಿದಂತೆ ಸಹಸ್ರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)