ರೈಫಲ್ ಶೂಟಿಂಗ್‌ನಲ್ಲಿ ಎಸ್‌ಪಿಗೆ ಸೋಲು

7

ರೈಫಲ್ ಶೂಟಿಂಗ್‌ನಲ್ಲಿ ಎಸ್‌ಪಿಗೆ ಸೋಲು

Published:
Updated:

 


ಬಾಗಲಕೋಟೆ: ನವನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಎರಡನೇ ದಿನದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಹಿರಿಯ ಅಧಿಕಾರಿಗಳ ವಿಭಾಗದ ರೈಫಲ್ ಶೂಟಿಂಗ್‌ನಲ್ಲಿ ಕರಾರುವಕ್ಕಾಗಿ ಶೂಟ್ ಮಾಡುವಲ್ಲಿ ವಿಫಲರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಜಮಖಂಡಿ ಡಿಎಸ್‌ಪಿ ಜಿ.ಆರ್. ಕಾಂಬಳೆ ಎದುರು ಸೋಲೊಪ್ಪಿಕೊಂಡರು.

 

ಆದರೆ, ಹಿರಿಯ ಅಧಿಕಾರಿಗಳಿಗೆ ನಡೆದ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಎಸ್‌ಪಿ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಜಮಖಂಡಿ ಡಿಎಸ್‌ಪಿ ಜಿ.ಆರ್. ಕಾಂಬಳೆ ಅವರಿಗೆ ಸೋಲಿನ ರುಚಿ ತೋರಿಸಿದರು.

 

ವಿವಿಧ ಸ್ಪರ್ಧೆಗಳ ಫಲಿತಾಂಶ

5000 ಮೀಟರ್ ಓಟ (ಪುರುಷ) ಸ್ಪರ್ಧೆಯಲ್ಲಿ  ಸಿ.ಬಿ. ಸಾಗನೂರ (ಗುಳೇದಗುಡ್ಡ), ಡಿ.ವೈ.ಗುರಿಕಾರ(ಮುಧೋಳ), ಲಾಂಗ್ ಜಂಪ್ (ಪುರುಷ)ನಲ್ಲಿ ಯು.ಎಸ್.ಒಡೆಯರ (ಬಾಗಲ ಕೋಟೆ ಶಹರ), ಎಂ.ಎಚ್.ಮುಲ್ಲಾ (ಗುಳೇದಗುಡ್ಡ), ಡಿಸ್ಕಸ್ ಥ್ರೋ (ಪುರುಷ)ನಲ್ಲಿ 

ಪಿ.ಟಿ.ಪವಾರ (ಗುಳೇದಗುಡ್ಡ), ಎಂ. ಡಿ.ಸವದಿ(ಡಿಎಆರ್ ಬಾಗಲಕೋಟೆ) ಡಿ.ಎಸ್.ಪಿಗಳಿಗೆ ಡಿಸ್ಕಸ್ ಥ್ರೋನಲ್ಲಿ ಎಸ್.ಎ.ವೀರನಗೌಡ (ಬಾಗಲಕೋಟೆ), ಜಿ.ಆರ್.ಕಾಂಬಳೆ (ಜಮಖಂಡಿ), ಸಿಪಿಐಗಳಿಗೆ ಡಿಸ್ಕಸ್ ಥ್ರೋನಲ್ಲಿ ಯು.ಶರಣಪ್ಪ (ಹುನಗುಂದ), ಎಸ್.ಆರ್. ಕಟ್ಟಿಮನಿ (ಗ್ರಾಮೀಣ), ಪಿ.ಎಸ್.ಐಗಳಿಗೆಗೆ ಡಿಸ್ಕಸ್ ಥ್ರೋನಲ್ಲಿ  ಸಿ.ಜಿ.ಮಠಪತಿ,  ಸುಂದರೇಶ ಹೊಳೆಯನ್ನವರ(ತೇರದಾಳ) ವಿಜೇತರಾಗಿದ್ದಾರೆ.

 

400 ಮೀಟರ್ ಓಟ (ಪುರುಷ)ದಲ್ಲಿ ಎಸ್. ಎನ್. ಮುರನಾಳ (ಬಾದಾಮಿ),  ವಿ.ಎಚ್. ತುಂಬದ(ಬಾದಾಮಿ), 1500 ಮೀಟರ್ ಓಟ (ಪುರುಷ)ದಲ್ಲಿ ಸಿ.ಬಿ. ಸಾಗನೂರ (ಬಾದಾಮಿ), ಎಂ.ಎಸ್. ಸವದಿ (ನವನಗರ), 10 ಸಾವಿರ ಮೀಟರ್ ಓಟ (ಪುರುಷ)ದಲ್ಲಿ   ಎಸ್.ಎಸ್. ತೋಟಗೇರ (ಡಿಎಆರ್ ಬಾಗಲಕೋಟೆ), ಎಂ.ಎಲ್. ಗೌಡರ(ಬಾದಾಮಿ), ಹೈ ಜಂಪ್(ಪುರುಷ)ನಲ್ಲಿ ಎಸ್.ಎಂ. ಮುರನಾಳ (ಬಾದಾಮಿ), ಎಸ್.ಎಂ. ಬದ್ರಶೆಟ್ಟಿ (ಡಿಎಆರ್  ಬಾಗಲಕೋಟೆ)

 

ಹ್ಯಾಮರ್ ಥ್ರೋ (ಪುರುಷ)ನಲ್ಲಿ ವಿ.ಎಸ್. ಒಡೆಯರ (ಬಾಗಲಕೋಟೆ ಶಹರ), ಎಸ್.ಬಿ. ಸೊಲ್ಲಾಪುರ (ಬಾದಮಿ) ವಿಜೇತರಾಗಿದ್ದಾರೆ.

400 ಮೀಟರ್ ಓಟ (ಮಹಿಳೆ): ಬಿ.ಕೆ. ಚವ್ಹಾಣ (ಬಾಗಲಕೋಟೆ ಸಂಚಾರಿ),  ಆರ್.ಎಸ್. ಕುಂಬಾರ(ಬಾದಾಮಿ), ಲಾಂಗ್ ಜಂಪ್(ಮಹಿಳೆ)ನಲ್ಲಿ ಎನ್.ಜಿ. ಪಡಸಲಗಿ(ಜಮಖಂಡಿ ಗ್ರಾಮೀಣ), ಕೆ.ಬಿ. ಪಾಲೋಜಿ(ತೇರದಾಳ), ಹೈ ಜಂಪ್ (ಮಹಿಳೆ)ನಲ್ಲಿ ಜಿ.ಎಂ. ನಾಯ್ಕರ(ಮುಧೋಳ), ಸಿ.ಎಲ್. ಮಾದರ(ಬಾದಾಮಿ). 

 

ಡಿಪಿಒ ಸಿಬ್ಬಂದಿಗಾಗಿ 100 ಮೀ ಓಟ: (ಪುರುಷ)ದಲ್ಲಿ ಎಸ್.ಎಸ್. ಜಾಲಿಹಾಳ(ಬಾಗಲಕೋಟೆ), ಎಂ.ಎಸ್. ಹಂಗರಗಿ (ಬಾಗಲಕೋಟೆ), ಡಿಪಿಒ ಸಿಬ್ಬಂದಿಗಾಗಿ 100 ಮೀ. ಓಟ (ಮಹಿಳೆ)ದಲ್ಲಿ ಸಂಗೀತಾ ಸಿ. ಬಂದಿ (ಬಾಗಲಕೋಟೆ),  ಎಂ.ಎಚ್. ಪಾಟೀಲ (ಬಾಗಲಕೋಟೆ) ವಿಜೇತರು   

 

ಡಿಪಿಒ ಸಿಬ್ಬಂದಿಗಾಗಿ ಶಾಟ್‌ಪಟ್ 40 ವರ್ಷ ಒಳಗಿನವರಿಗೆ (ಪುರುಷ):  ಎಸ್. ರಾಜಶೇಖರ (ಬಾಗಲಕೋಟೆ), ಎಸ್.ಎಸ್. ಜಾಲಿಹಾಳ (ಬಾಗಲಕೋಟೆ)  ವಿಜೇತರಾಗಿದ್ದಾರೆ.

 

ಡಿಪಿಒ ಸಿಬ್ಬಂದಿಗಾಗಿ ಶಾಟ್‌ಪಟ್ 40 ವರ್ಷ ಒಳಗಿನವರಿಗೆ (ಮಹಿಳೆ): ಸಂಗೀತಾ ಸಿ. ಬಂದಿ(ಬಾಗಲಕೋಟೆ), ಶ್ವೇತಾ ಮುತ್ತಗಿ(ಬಾಗಲಕೋಟೆ), ಡಿಪಿಒ ಸಿಬ್ಬಂದಿಗಾಗಿ ಶಾಟ್‌ಪಟ್ 40 ವರ್ಷ ಮೇಲ್ಪಟ್ಟವರಿಗೆ (ಮಹಿಳೆ) ಎಂ.ವಿ. ಕುಲಕರ್ಣಿ (ಬಾಗಲಕೋಟೆ),  ಟಿ.ಎ. ಮುಲ್ಲಾ(ಬಾಗಲಕೋಟೆ) ವಿಜೇತರು.

 

ರೈಫಲ್ ಶೂಟಿಂಗ್ (ಸಿಪಿಐ/ಪಿಐ ಅಧಿಕಾರಿಗಳಿಗೆ): ಎಸ್.ಆರ್. ಕಟ್ಟಿಮನಿ (ಬಾಗಲಕೋಟೆ ಗ್ರಾಮೀಣ), ಎಸ್.ವೈ. ಪಾಟೀಲ( ಡಿಎಆರ್ ಬಾಗಲಕೋಟೆ)

 

ರೈಫಲ್ ಶೂಟಿಂಗ್ (ಪಿಎಸ್‌ಐ)ನಲ್ಲಿ ಎಸ್.ಎಚ್. ಹೊಸಮನಿ(ಮುಧೋಳ), ನವೀನ ಜಕ್ಕಲಿ(ನವನಗರ), ಪಿಸ್ತೂಲ ಶೂಟಿಂಗ್ (ಸಿಪಿಐ/ಪಿಐ ಅಧಿಕಾರಿಗಳಿಗೆ)ನಲ್ಲಿ ಎಸ್.ವೈ. ಪಾಟೀಲ(ಡಿಎಆರ್ ಬಾಗಲಕೋಟೆ), ಯು.ಬಿ. ಚಿಕ್ಕಮಠ (ಜಮಖಂಡಿ ವೃತ್ತ), ಪಿಸ್ತೂಲ ಶೂಟಿಂಗ್ (ಪಿಎಸ್‌ಐಗಳಿಗೆ)ನಲ್ಲಿ ಪಿ.ಎಂ. ಪತ್ತಾರ(ಬಾಗಲಕೋಟೆ ಶಹರ),  ಎಂ.ವಿ. ಹೊಸಪೇಟೆ(ಕಲಾದಗಿ), ರೈಫಲ್ ಶೂಟಿಂಗ್ (ಪೊಲೀಸ್ ಪುರುಷ ಸಿಬ್ಬಂದಿ): ಬಿ.ಎಲ್. ಸೋನಾ, ಎಸ್ ಐ ಡಂಗಿ, ರೈಫಲ್ ಶೂಟಿಂಗ್ (ಪೊಲೀಸ್ ಮಹಿಳಾ ಸಿಬ್ಬಂದಿ)ನಲ್ಲಿ  ಎಸ್.ಎಫ್. ತಡಸಿ, ಜಾವಲಿನ್ ಥ್ರೋ(ಪುರುಷ)ನಲ್ಲಿ  ವೈ.ಎಸ್.ಬೈಲಕೋರ, ಎಂ.ಎಸ್.ಸವದಿ, ನಿಸ್ತಂತು ಸಿಬ್ಬಂದಿಗಾಗಿ 100 ಮೀ. ಓಟದಲ್ಲಿ ವಿ. ಕೆ. ಮಂಜೂನಾಥ,  ಎ.ಡಿ.ಮುಲ್ಲಾ, ನಿಸ್ತಂತು ಅಧಿಕಾರಿಗಳಿಗೆ 100 ಮೀ. ಓಟದಲ್ಲಿ  ಟಿ ಎ.ಸಿದ್ದಣ್ಣ, ದಾನಪ್ಪ.ಎಲ್.ರಾಠೋಡ,  ಪೊಲೀಸ್ ಅಧಿಕಾರಿಗಳಿಗೆ ಕ್ರಿಕೆಟ್‌ದಲ್ಲಿ ಬಾಗಲಕೋಟೆ ಉಪವಿಭಾಗ ( ಪಂದ್ಯ ಪುರುಷೋತ್ತಮ ಸಿ.ಜಿ.ಮಠಪತಿ ಪಿ.ಎಸ್.ಐ ಅಮೀನಗಡ) ವಿಜೇತರಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry