ರೈಲಿನಲ್ಲಿ ಕಳವು:ಆರೋಪಿ ಸೆರೆ

7

ರೈಲಿನಲ್ಲಿ ಕಳವು:ಆರೋಪಿ ಸೆರೆ

Published:
Updated:

ಬೆಂಗಳೂರು: ಪ್ರಯಾಣಿಕನ ಸೋಗಿನಲ್ಲಿ ರೈಲಿನಲ್ಲಿ ಬಂದು ನಿದ್ರಿಸುತ್ತಿರುವವರಿಂದ ಹಣ ಹಾಗೂ ಚಿನ್ನಾಭರಣ ಕಳವು ಮಾಡುತ್ತಿದ್ದ ಶಿವಸ್ವಾಮಿ ಎಂಬಾತನನ್ನು ಗುರುವಾರ ಬಂಧಿಸಿರುವ ನಗರ ರೈಲ್ವೆ ಪೊಲೀಸರು, ನಗದು ಸೇರಿದಂತೆ ರೂ 1.65 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಮಂಡ್ಯದ ಕುವೆಂಪುನಗರ ನಿವಾಸಿಯಾದ ಶಿವಸ್ವಾಮಿ, ಪ್ರತಿದಿನ ಬೆಳಿಗ್ಗೆ ರೈಲಿನಲ್ಲಿ ನಗರಕ್ಕೆ ಬರುತ್ತಿದ್ದ. ಈ ವೇಳೆ ನಿದ್ರೆ ಮಾಡುತ್ತಿರುವ ಪ್ರಯಾಣಿಕರನ್ನು ಗುರುತಿಸಿ ಬ್ಯಾಗ್‌ಕಳವು ಮಾಡುತ್ತಿದ್ದ. ಕಳೆದ ತಿಂಗಳು ಶಿವಮೊಗ್ಗದಿಂದ ಬಂದ ಪ್ರಯಾಣಿಕರೊಬ್ಬರ ಎಟಿಎಂ ಕಾರ್ಡ್ ಕಳವು ಮಾಡಿ, ಅದರ ಮೇಲೆ ಬರೆದಿದ್ದ ರಹಸ್ಯ ಸಂಖ್ಯೆ (ಪಾಸ್‌ವರ್ಡ್) ಸಹಾಯದಿಂದ ರೂ 40 ಸಾವಿರ ಡ್ರಾ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry