ಭಾನುವಾರ, ಜೂನ್ 13, 2021
26 °C

ರೈಲಿನಲ್ಲಿ ಹೆರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಳ್ನಾವರ: ಹರಿಪ್ರಿಯಾ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಣಿಸುತ್ತಿದ್ದ ಗರ್ಭಿಣಿಗೆ ಧಾರವಾಡ ಸಮೀಪ ರೈಲಿನಲ್ಲಿಯೇ ಹೆರಿಗೆಯಾದ ನಡೆದ ಘಟನೆ ಗುರುವಾರ ಸಂಜೆ ನಡೆಯಿತು.ಸ್ಥಳೀಯ ನಿವಾಸಿ ಫರಜಾನಾ ಬಾನು ಕಿತ್ತೂರ ಅವರು ರೈಲಿನಲ್ಲಿ ಗಂಡು ಮಗುವನ್ನು ಹೆತ್ತವರು. ವೈದ್ಯರಿಗೆ ತೋರಿಸಲು ತಮ್ಮ ಪತಿಯೊಂದಿಗೆ ಗುರುವಾರ ಸಂಜೆ ಅವರು ರೈಲಿನಲ್ಲಿ ಹೊರಟಿದ್ದರು. ಅರ್ಧ ಹಾದಿ ಕ್ರಮಿಸುತ್ತಿದ್ದಂತೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಎಚ್ಚೆತ್ತ ಪ್ರಯಾಣಿಕರು ಗರ್ಭಿಣಿ ಇದ್ದ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಬೇರೆ ಬೋಗಿಗೆ ತೆರಳುವಂತೆ ಮಾನವಿ ಮಾಡಿಕೊಳ್ಳಲಾಯಿತು.ಆಶ್ವರ್ಯ ಎಂದರೆ ಅದೇ ಬೋಗಿಯಲ್ಲಿದ್ದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಯೂರ ಕದಂ ಕೂಡಾ ಪ್ರಯಾಣಿಸುತ್ತಿದ್ದರು. ಕೂಡಲೇ ನೆರವಿಗೆ ಅವರು ಧಾವಿಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು. ಧಾರವಾಡಕ್ಕೆ ರೈಲು ತಲುಪಿದ ನಂತರ ಸುಮಾರು 15 ನಿಮಿಷ ತಡೆಯಲಾಗಿತ್ತು. ಕೂಡಲೇ ತುರ್ತು ಘಟಕದ ವಾಹನ 108ಕ್ಕೆ ಕರೆ ಮಾಡಿ  ಬಾನಂತಿ ಹಾಗೂ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಾನಂತಿ ಮತ್ತು ಮಗುವಿನ ಆರೋಗ್ಯ ಚೆನ್ನಾಗಿದೆ ಎಂದು ಮಗುವಿನ ತಂದೆ ಇರ್ಷಾದ ಅಹ್ಮದ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ರೈಲಿನಲ್ಲಿ ಪ್ರಯಾಣಿಸುತ್ತಿದ್ದ  ಜಗನ್ನಾಥ ಅಗಸಿಮನಿ, ರಾಜೇಸಾಬ್ ಹಾಸಿಮನವರ, ಹನಮಂತ ರಾವ್ ಬೋಸಲೆ. ಎಂ.ಎಂ. ಕಟ್ಟಿಮನಿ ಇತರರು ಬಾನಂತಿಗೆ ಧೈರ್ಯ ತುಂಬಿ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಕರೆ ತಂದು ಮಾನವೀಯತೆ ಮೆರೆದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.