ಮಂಗಳವಾರ, ಅಕ್ಟೋಬರ್ 15, 2019
29 °C

ರೈಲಿನಿಂದ ಜಿಗಿದು ಸಾವು

Published:
Updated:

ಮಿರ್ಜಾಪುರ (ಪಿಟಿಐ): ತಮ್ಮ ಬೋಗಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ವದಂತಿ ಕೇಳಿ ಭಯಭೀತರಾದ ಜನರ ಗುಂಪು, ಚಲಿಸುತ್ತಿದ್ದ ರೈಲಿನಿಂದ ಹೊರಗೆ ಹಾರಿದಾಗ ಇಬ್ಬರು ಸಾವಿಗೀಡಾದ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.ಇಲ್ಲಿನ ಉಜ್ಜಾಲ ಸೇತುವೆ ಬಳಿ ಈ ದುರ್ಘಟನೆ ನಡೆದಿದ್ದು, ಇದೇ ವೇಳೆ ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.`ಪುಣೆ ಮತ್ತು ಪಟ್ನಾ ನಡುವೆ ಸಂಚರಿಸುವ ವಿಂಧ್ಯಾಚಲ್ ಎಕ್ಸ್‌ಪ್ರೆಸ್ ರೈಲಿನಿಂದ ಹೊರಗೆ ನೆಗೆದ ಏಳು ಪ್ರಯಾಣಿಕರಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಐವರು ತೀವ್ರ ಗಾಯಗೊಂಡಿದ್ದಾರೆ~ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)