ರೈಲು ಅಪಘಾತ: ಮೂವರ ಸಾವು

7

ರೈಲು ಅಪಘಾತ: ಮೂವರ ಸಾವು

Published:
Updated:

ರಾಂಜಿಯಾ, ಅಸ್ಸಾಂ (ಪಿಟಿಐ):  ಪ್ರಯಾಣಿಕರಿದ್ದ ರೈಲು ಶುಕ್ರವಾರ ಹಳಿ ದಾಟುತ್ತಿದ್ದ ಜೆಸಿಬಿ ಯಂತ್ರದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂರು ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಜೆಸಿಬಿ ಚಾಲಕನೂ ಸೇರಿದಂತೆ ಸತ್ತಿರುವ ಮೂವರಲ್ಲಿ ಇಬ್ಬರನ್ನು ಬಿಪುಲ್ ರಾಭಾ ಹಾಗೂ ಸಲಾಯ್ ಎಂದು ಗುರುತಿಸಲಾಗಿದೆ. `ಬೊಂಗೈಗಾಂ ಗುವಾಹಟಿ ಚಿಲ್‌ರಾಯ್~ ರೈಲು ಅಜರಾ ಮತ್ತು ಮಿರ್ಜಾ ಪ್ರದೇಶದ ಮಧ್ಯಭಾಗ ಗೊಸಾಯಂಗ್‌ಹಟಿ ಬಳಿ ಬೆಳಿಗ್ಗೆ 9.30 ರಲ್ಲಿ ಅಪಘಾತಕ್ಕೀಡಾಗಿದ್ದು, ಎಂಜಿನ್ ಹಾಗೂ 5 ಬೋಗಿಗಳು ಹಳಿ ತಪ್ಪಿದ್ದವು ಎಂದು ಮೂಲಗಳು ತಿಳಿಸಿವೆ. ಗಾಯಾಳುಗಳನ್ನು ಗ್ರಾಮಸ್ಥರು ಮಿರ್ಜಾ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದಾರೆ. ಗಂಭೀರ ಗಾಯಗೊಂಡವರನ್ನು ಗುವಾಹಟಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳಿ ತಪ್ಪಿದ ಬೋಗಿಗಳು ಮುರಿದಿದ್ದು, ರೈಲ್ವೆ ಹಳಿ ಕೂಡಾ ಜಖಂಗೊಂಡಿದೆ  ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry