ರೈಲು: ಇ-ಟಿಕೆಟ್‌ಗೆ ಎಸ್‌ಎಂಎಸ್ ಸಾಕು

7

ರೈಲು: ಇ-ಟಿಕೆಟ್‌ಗೆ ಎಸ್‌ಎಂಎಸ್ ಸಾಕು

Published:
Updated:

ಹುಬ್ಬಳ್ಳಿ: ರೈಲು ಪ್ರಯಾಣಕ್ಕೆ ಅಂತರ್ಜಾಲ ಮುಖೇನ ಸೀಟು ಕಾಯ್ದಿರಿಸುವ ಪ್ರಯಾಣಿಕರು ಇನ್ನು ಮುಂದೆ ಮುದ್ರಿತ ಟಿಕೆಟ್‌ಗೆ ಬದಲಾಗಿ ರೈಲ್ವೆ ವೆಬ್‌ಸೈಟ್‌ನಿಂದ ತಮ್ಮ ಮೊಬೈಲುಗಳಿಗೆ ಬರುವ ಟಿಕೆಟ್ ಕಾಯ್ದಿರಿಸುವಿಕೆ ಸಂದೇಶ (ಎಸ್‌ಎಂಎಸ್)ವನ್ನೇ ಅಧಿಕೃತ ಇ-ಟಿಕೆಟ್ ಎಂದು ಬಳಸಬಹುದಾಗಿದೆ.ನೈರುತ್ಯ ರೈಲ್ವೆಯು ಈ ಕುರಿತು ಪ್ರಕಟಣೆ ನೀಡಿದೆ. ಅದರಂತೆ ಐಆರ್‌ಸಿಟಿಸಿಯಿಂದ ಬರುವ ಸಂದೇಶವನ್ನು ಟಿಕೆಟ್ ಆಗಿ ಬಳಸಬಹುದಾಗಿದೆ. ಈ ಸಂದೇಶವು ಪಿಎನ್‌ಆರ್ ಸಂಖ್ಯೆ, ಪ್ರಯಾಣಿಸುವ ರೈಲು ಸಂಖ್ಯೆ, ಪ್ರಯಾಣದ ದಿನಾಂಕ, ಪ್ರಯಾಣಿಕರ ಹೆಸರು ಹಾಗೂ ದರವನ್ನು ಒಳಗೊಂಡಿರುತ್ತದೆ.ಇದರೊಟ್ಟಿಗೆ ತಮ್ಮ ಭಾವಚಿತ್ರ ಇರುವ ಗುರುತುಪತ್ರವನ್ನು ತಪಾಸಣೆಯ ಹಾಜರುಪಡಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry