ರೈಲು ಗಾಲಿ ಕಾರ್ಖಾನೆಗೆ ಜಯ

7

ರೈಲು ಗಾಲಿ ಕಾರ್ಖಾನೆಗೆ ಜಯ

Published:
Updated:

ಬೆಂಗಳೂರು: ವಿಜಯ್ ಗಳಿಸಿದ ಒಂದು ಗೋಲಿನ ನೆರವಿನಿಂದ ರೈಲು ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್) ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ 1-0ಗೋಲಿನಿಂದ ಪೋಸ್ಟಲ್ ಎದುರು ಜಯಭೇರಿ ಬಾರಿಸಿತು.ರಾಜ್ಯ ಫುಟ್‌ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯ್ 53ನೇ ನಿಮಿಷದಲ್ಲಿ ಗೋಲು ತಂದಿತ್ತು ಗೆಲುವಿಗೆ ಕಾರಣರಾದರು.`ಎ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಬೆಂಗಳೂರು ಮಾರ್ಸ್‌ 2-0ಗೋಲುಗಳಿಂದ ಬೆಂಗಳೂರು ಕಿಕ್ಕರ್ಸ್‌ ತಂಡವನ್ನು ಮಣಿಸಿತು. .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry