ಭಾನುವಾರ, ಜೂನ್ 13, 2021
25 °C

ರೈಲು ಡಿಕ್ಕಿ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: ಮಾನವ ರಹಿತ ಲೆವೆಲ್ ಕ್ರಾಸಿಂಗ್ ದಾಟುತ್ತಿದ್ದ ಲಾರಿಗೆ, ಬೆಂಗಳೂರು- ದೇವನಹಳ್ಳಿ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಚಾಲಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಯರ್ತಿಗಾನಹಳ್ಳಿ ಲೆವೆಲ್ ಕ್ರಾಸಿಂಗ್‌ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ರೈಲು ಚಾಲಕ ಸುರೇಶ್ ಕುಮಾರ್ ಹಾಗೂ ಲಾರಿ ಚಾಲಕ ಚಿಕ್ಕಪ್ಪಯ್ಯ (25) ಎಂದು ಗುರುತಿಸಲಾಗಿದೆ. ಬಾಗಲೂರಿನ ನಾರಾಯಣ ಎಂಬುವರಿಗೆ ಸೇರಿದ ಲಾರಿಯು  ಕಲ್ಲುಗಳನ್ನು ತುಂಬಿಕೊಂಡು ಯರ್ತಿಗಾನಹಳ್ಳಿ ಕಡೆ ಸಾಗಲು ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸ್ ದಾಟುತ್ತಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.