ಶುಕ್ರವಾರ, ನವೆಂಬರ್ 22, 2019
22 °C

ರೈಲು ದುರಂತದಲ್ಲಿ ಓರ್ವನ ಸಾವು

Published:
Updated:
ರೈಲು ದುರಂತದಲ್ಲಿ ಓರ್ವನ ಸಾವು

ಚೆನ್ನೈ/ನವದೆಹಲಿ (ಐಎಎನ್‌ಎಸ್) : ತಮಿಳುನಾಡಿನ ಸಿತೇರಿ ಬಳಿ ಬುಧವಾರ ಬೆಳಗ್ಗೆ ಮುಜಾಫರ್ - ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ 11 ಬೋಗಿಗಳು ಮಗುಚಿಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು 33 ಮಂದಿಗೆ ಗಾಯಗಳಾಗಿವೆ ಎಂದು ವೆಲ್ಲೂರಿನ ಪೊಲೀಸ್ ವರಿಷ್ಠಾಧಿಕಾರಿ ಐ ಈಶ್ವರನ್ ಅವರು ತಿಳಿಸಿದರು.

ಗಾಯಾಳುಗಳನ್ನು ಅರಕ್ಕೊಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ದಕ್ಷಿಣ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದರು. ಈ ಘಟನೆಯಿಂದಾಗಿ ಅರಕ್ಕೊಣಂ ವಲಯದ ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಬೆಂಗಳೂರಿನಿಂದ ಚೆನ್ನೈಗೆ ಹೊರಡುವ ರೈಲು ಸೇರಿದಂತೆ ಒಟ್ಟು ಏಳು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆಯು ಬಸ್ ಸೇವೆಯನ್ನು ಒದಗಿಸಿದ್ದು ಕನಿಷ್ಠ 200 ಮಂದಿ ಪ್ರಯಾಣಿಕರು ಗುವಾಹತಿ ಎಕ್ಸ್‌ಪ್ರೆಸ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

11 ರೈಲುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು 3 ರೈಲುಗಳನ್ನು ಭಾಗಶಃ ಹಾಗೂ ನಾಲ್ಕು ರೈಲುಗಳ ಮಾರ್ಗ ಬದಲಾವಣೆ ಮಾಡಿರುವುದಾಗಿ ದಕ್ಷಿಣ ರೈಲ್ವೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)