ರೈಲು ಪ್ರಯಾಣಕರಿಗೂ ಟಿವಿ ಸೌಲಭ್ಯ?

7

ರೈಲು ಪ್ರಯಾಣಕರಿಗೂ ಟಿವಿ ಸೌಲಭ್ಯ?

Published:
Updated:

ನವದೆಹಲಿ (ಪಿಟಿಐ):  ರೈಲ್ವೆ ಇಲಾಖೆ ಅಂದುಕೊಂಡಂತೆ ಎಲ್ಲವೂ ನಡೆದಲ್ಲಿ ಪ್ರಯಾಣಿಕರು ಶೀಘ್ರವೇ  ತಮ್ಮ ಮೆಚ್ಚಿನ ಟಿವಿ ಕಾರ್ಯಕ್ರಮ ಹಾಗೂ ಕ್ರಿಕೆಟ್ ಪಂದ್ಯದ ನೇರಪ್ರಸಾರವನ್ನು ರೈಲಿನಲ್ಲಿಯೇ ವೀಕ್ಷಿಸಬಹುದು.ಈ ಸೌಲಭ್ಯವನ್ನು ಒದಗಿಸುವ ಕುರಿತು ಹಲವು ವರ್ತಕರೊಂದಿಗೆ ಉತ್ತರ ರೈಲ್ವೆ ಮಾತುಕತೆ ನಡೆಸುತ್ತಿದ್ದು, ಶೀಘ್ರವೇ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಸೇವೆ ದೊರೆಯಲಿದೆ.ಇಂತಹದ್ದೊಂದು ದೊಡ್ಡ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಪರೀಕ್ಷಾರ್ಥವಾಗಿ ಮಾರ್ಚ್ 1ರಿಂದ ದೆಹಲಿ-ಕಲ್ಕ ನಡುವೆ ಸಂಚರಿಸುವ ಶತಾಬ್ದಿ ಎಕ್ಸ್‌ಪ್ರೆಸ್‌ನ ಒಂದು ಬೋಗಿಯಲ್ಲಿ ಅಳವಡಿಸಲಾಗುವುದು. ಒಂದುವೇಳೆ ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು ಯಶಸ್ಸು ಕಂಡರೆ ಈ ಸೌಲಭ್ಯ ಒದಗಿಸುವ ವರ್ತಕರನ್ನು ಕರೆಸಿ ಮಾತುಕತೆ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ರೈಲಿನ ಎಕ್ಸಿಕ್ಯೂಟಿವ್ ಕೋಚ್‌ನಲ್ಲಿರುವ ಸೀಟಿನ ಹಿಂಭಾಗದಲ್ಲಿ ಟಿವಿ ಪರದೆಗಳನ್ನು ಅಳವಡಿಸಲಾಗುವುದು. ಇದು ವಿಮಾನದಲ್ಲಿ ಪ್ರಯಾಣಿಸುವಾಗ ನೀಡುವ ಅನುಭವ ಒದಗಿಸಲಿದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry