ರೈಲು ಬೋಗಿಗಳಲ್ಲಿ ಸ್ವಯಂಚಾಲಿತ ಬಾಗಿಲು

7

ರೈಲು ಬೋಗಿಗಳಲ್ಲಿ ಸ್ವಯಂಚಾಲಿತ ಬಾಗಿಲು

Published:
Updated:

ನವದೆಹಲಿ(ಪಿಟಿಐ): ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಕಾಪಾಡಲು ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ದೃಷ್ಟಿಯಿಂದ ಕೆಲ ಹವಾನಿಯಂತ್ರಿತ (ಎ.ಸಿ) ರೈಲು ಬೋಗಿಗಳಲ್ಲಿ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.ಈಚೆಗೆ ನಡೆದ ರೈಲ್ವೆ ಮಂಡಳಿ ಸಭೆಯಲ್ಲಿ ಸ್ವಯಂಚಾಲಿತ ಬಾಗಿಲು ಅಳವಡಿಕೆ ಯೋಜನೆ ಕುರಿತು ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದ್ದು, ರೈಲಿನ ಬಾಗಿಲುಗಳನ್ನು ನಿಯಂತ್ರಿಸುವ ಮೇಲ್ವಿಚಾರಣೆಯನ್ನು ರೈಲಿನ ಚಾಲಕ ಅಥವಾ ರೈಲ್ವೆ ರಕ್ಷಣಾ ಸಿಬ್ಬಂದಿ ವಹಿಸುವ ಸಾಧ್ಯತೆ ಇದೆ.ರೈಲು ನಿಲ್ದಾಣಕ್ಕೆ ಬಂದ ವೇಳೆ ಬಾಗಿಲುಗಳು ಏಕಕಾಲಕ್ಕೆ  ಸ್ವಯಂಚಾಲಿತವಾಗಿ ತೆರೆದು­ಕೊಳ್ಳುವ ಹಾಗೂ ರೈಲು ಹೊರಟ ನಂತರ ಬಾಗಿಲುಗಳು  ಮುಚ್ಚಿಕೊಳ್ಳುವ ಈ ನೂತನ ವ್ಯವಸ್ಥೆಯು ಮೆಟ್ರೊ ರೈಲುಗಳಲ್ಲಿ ಈಗಾಗಲೇ ಅಳವಡಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry