ರೈಲು ಮಾರ್ಗ: ಭೂಸ್ವಾಧೀನಕ್ಕೆ ವಿರೋಧ

7

ರೈಲು ಮಾರ್ಗ: ಭೂಸ್ವಾಧೀನಕ್ಕೆ ವಿರೋಧ

Published:
Updated:

ಬಾಗಲಕೋಟೆ: ಉದ್ದೇಶಿತ ಬಾಗಲಕೋಟೆ- ಕುಡುಚಿ ರೈಲು ಮಾರ್ಗ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಬಾಗಲಕೋಟೆ ಮತ್ತು ಮುಚಖಂಡಿ ಭಾಗದ ಸಂತ್ರಸ್ತರು ಶುಕ್ರವಾರ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಅವರಿಗೆ ಮನವಿ ಸಲ್ಲಿಸಿದರು.ರೈಲು ಮಾರ್ಗ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ಥರು ಸೂಕ್ತ ಪರಿಹಾರ ಒದಗಿಸುವಂತೆ ಕೋರಿ ಇತ್ತೀಚೆಗೆ ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ಹೋದ ಸಂದರ್ಭದಲ್ಲಿ ರೈತರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿಲ್ಲ, ಉಪವಿಭಾಗಾಧಿಕಾರಿ ಅವರ ನಡವಳಿಕೆ ಬೇಷರ ತರಿಸಿದೆ ಎಂದು ದೂರಿದರು.ಭೂಮಿ ಕಳೆದುಕೊಳ್ಳುವ ಪ್ರತಿ ರೈತನ ಕುಟುಂಬದ ಒಬ್ಬರಿಗೆ `ಡಿ~ದರ್ಜೆ ನೌಕರಿ ನೀಡಬೇಕು, ರೈಲು ಮಾರ್ಗ ಹಾದು ಹೋಗುವ ಜಮೀನನ್ನು ವಶಪಡಿಸಿಕೊಂಡ ಬಳಿಕ ಉಳಿಯುವ ತುಂಡು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು, ಭೂಮಿಯ ಪರಿಹಾರ ಧನವನ್ನು ಶೇ. 25ರ ಬದಲಾಗಿ ಶೇ.75 ನೀಡಬೇಕು ಎಂದು ಆಗ್ರಹಿಸಿದರು.ರೈಲು ಮಾರ್ಗ ಸಂತ್ರಸ್ಥರ ಹಿತರಕ್ಷಣಾ ಸಮಿತಿಯ ಪ್ರಮುಖರಾದ ವೈ.ಆರ್.ಲಮಾಣಿ, ಮನೋಹರ ಚಿತ್ತರಗಿ, ಬಸಪ್ಪ ಸ್ವಾಗಿ, ದೇನಪ್ಪ ಲಮಾಣಿ, ರೇವಣಪ್ಪ ಲಮಾಣಿ, ಹೀರೂ ಲಮಾಣಿ, ಶಂಕ್ರಪ್ಪ ಲಮಾಣಿ, ಮಹಾಂತೇಶ ಚೊಳಚಗುಡ್ಡ, ಸಂಗಪ್ಪ ಕೊಪ್ಪದ, ಗಂಗರಾಮ ಲಮಾಣಿ, ರಾಮ ಲಮಾಣಿ, ಭೀಮಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry