ಗುರುವಾರ , ಏಪ್ರಿಲ್ 22, 2021
29 °C

ರೈಲು ಮುಂಗಡ ಟಿಕೆಟ್: ಗುರುತು ಚೀಟಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಗಡ ಟಿಕೆಟ್ ಖರೀದಿಸಿ ಪ್ರಯಾಣಿಸುವವರಿಗೆ ಭಾವಚಿತ್ರ ಇರುವ ಗುರುತಿನ ಚೀಟಿ/ಪತ್ರವನ್ನು ರೈಲ್ವೆ ಇಲಾಖೆ ಕಡ್ಡಾಯ ಮಾಡಿದೆ. ಇದು ಎಲ್ಲಾ ದರ್ಜೆಯ ರೈಲು ಪ್ರಯಾಣಿಕರಿಗೂ ಅನ್ವಯವಾಗಲಿದ್ದು, ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ.



ಸರ್ಕಾರದ ವಿವಿಧ ಇಲಾಖೆಗಳು ಅಥವಾ ಸಕ್ಷಮ ಪ್ರಾಧಿಕಾರದಿಂದ ಪಡೆದ ಭಾವಚಿತ್ರ ಇರುವ ಗುರುತಿನ ಚೀಟಿ/ಪತ್ರದ ಪಟ್ಟಿಗೆ ಇನ್ನು ಹಲವು ಬಗೆಯ ಗುರುತಿನ ಚೀಟಿಗಳನ್ನು ಇಲಾಖೆ ಸೇರಿಸಿದೆ.



ಎರಡನೇ ದರ್ಜೆ (2ಎಸ್), ಸ್ಲೀಪರ್ ದರ್ಜೆ (ಎಸ್‌ಎಲ್), ಎಕಾನಮಿ ದರ್ಜೆ (3ಇ) ಮತ್ತು ಪ್ರಥಮ ದರ್ಜೆ (ಎಫ್‌ಸಿ) ಪ್ರಯಾಣಿಕರು ಗುರುತು ಚೀಟಿ ಹೊಂದುವುದು ಕಡ್ಡಾಯವಾಗಲಿದೆ.



ಸದ್ಯ ಇ-ಟಿಕೆಟ್, ತತ್ಕಾಲ್ ಟಿಕೆಟ್, ಹವಾನಿಯಂತ್ರಣ ವ್ಯವಸ್ಥೆ ದರ್ಜೆ (ಏಸಿ) (ಮೂರನೇ ಎಕಾನಮಿ ದರ್ಜೆ- 3ಇ ಹೊರತು ಪಡಿಸಿ) ಪ್ರಯಾಣಿಕರು ಮಾತ್ರ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕಿತ್ತು.



ಗುರುತಿನ ಚೀಟಿ/ಪತ್ರದ ಪಟ್ಟಿ: ಭಾವಚಿತ್ರ ಮತ್ತು ಅಂಕಿಗಳಿಂದ ಕೂಡಿದ ಕೇಂದ್ರ/ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ನೀಡಿರುವ ಗುರುತಿನ ಚೀಟಿ, ಜಿಲ್ಲಾ ಆಡಳಿತ, ಸ್ಥಳೀಯ ಆಡಳಿತಗಳಿಂದ ಪಡೆದ ಯಾವುದೇ ಗುರುತಿನ ಪತ್ರ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, `ಆಧಾರ್~ ಕಾರ್ಡ್, ವಾಹನ ಚಾಲನಾ ಪರವಾನಗಿ ಪತ್ರ, ಪಿಂಚಣಿ ಆದೇಶ ಪತ್ರ, ಭಾವಚಿತ್ರವಿರುವ ಪಡಿತರ ಚೀಟಿ, ಹಿರಿಯ ನಾಗರಿಕರ ಗುರುತಿನ ಚೀಟಿ, ಇಎಸ್‌ಐ/ಸಿಜಿಎಚ್‌ಎಸ್ ಗುರುತಿನ ಪತ್ರಗಳು, ಶಾಲಾ, ಕಾಲೇಜುಗಳಿಂದ ನೀಡಿರುವ ವಿದ್ಯಾರ್ಥಿಗಳ ಗುರುತಿನ ಚೀಟಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಉಳಿತಾಯ ಖಾತೆಯ ಭಾವಚಿತ್ರವಿರುವ ಪುಸ್ತಕ. ಇವುಗಳಲ್ಲಿ ಯಾವುದಾದರೂ ಒಂದನ್ನು ಗುರುತಿನ ಚೀಟಿಯಾಗಿ ತೋರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.