ಶುಕ್ರವಾರ, ನವೆಂಬರ್ 22, 2019
24 °C

ರೈಲು ವೇಳಾಪಟ್ಟಿ ಬದಲಿನಿಂದ ತೊಂದರೆ

Published:
Updated:

ಮೈಸೂರಿನಿಂದ ಅರಸೀಕೆರೆಗೆ ಹೊರಡುವ ಪ್ಯಾಸೆಂಜರ್ ರೈಲುಗಾಡಿಯು ಈ ಹಿಂದೆ ಸಂಜೆ 6.20ಕ್ಕೆ ಮೈಸೂರನ್ನು ಬಿಡುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು. ಈಗ ರೈಲುಗಾಡಿಯು ಸಂಜೆ 6.45ಕ್ಕೆ ಹೊರಡುವುದರಿಂದ ವಿವಿಧ ರೈಲು ನಿಲ್ದಾಣಗಳಲ್ಲಿ ಇಳಿದು ತಮ್ಮ ತಮ್ಮ ಊರುಗಳಿಗೆ ತಲುಪಲು ರಾತ್ರಿವೇಳೆ ಸಾರಿಗೆ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ಪರದಾಡುವಂತಾಗಿ ಅನಾನುಕೂಲವೇ ಹೆಚ್ಚಾಗಿದೆ. ದಯವಿಟ್ಟು ವೇಳಾಪಟ್ಟಿಯನ್ನು ಮೊದಲಿನಂತೆ ಬದಲಾಯಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿ ಮನವಿ.

 

ಪ್ರತಿಕ್ರಿಯಿಸಿ (+)