ರೈಲು ಸಂಚಾರಕ್ಕೆ ಕಾಗೆಯಿಂದ ಅಡ್ಡಿ!

7

ರೈಲು ಸಂಚಾರಕ್ಕೆ ಕಾಗೆಯಿಂದ ಅಡ್ಡಿ!

Published:
Updated:

ಮುಂಬೈ (ಐಎಎನ್‌ಎಸ್):  ವಿದ್ಯುತ್ ಮಾರ್ಗದ ತಂತಿಗೆ ಕಾಗೆಯೊಂದು ಡಿಕ್ಕಿ ಹೊಡೆದು ಸತ್ತ ಪರಿಣಾಮವಾಗಿ ಸುಮಾರು ಎರಡು ಗಂಟೆಗಳ ಕಾಲ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾದ ಘಟನೆ ದಕ್ಷಿಣ ಮುಂಬೈನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.ದಕ್ಷಿಣ ಮುಂಬೈನ ಮರೇನ್ ಲೈನ್ಸ್ ನಿಲ್ದಾಣದ ಬಳಿ ಬೆಳಿಗ್ಗೆ 7.30ಕ್ಕೆ ವಿದ್ಯುತ್ ತಂತಿಗೆ ಕಾಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಶಾರ್ಟ್ ಸರ್ಕಿಟ್ ಉಂಟಾಯಿತು. ಹಾಗಾಗಿ ಆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡಚಣೆಯಾಯಿತು.ಆದರೆ ಯಾವುದೇ ರೈಲುಗಳ ಸಂಚಾರವನ್ನು ರದ್ದುಗೊಳಿಸಲಿಲ್ಲ. ಮೊದಲ ರೈಲಿನ ಮಾರ್ಗ ಬದಲಾಯಿಸಲಾಯಿತು. ತಕ್ಷಣ ರೈಲ್ವೆ ಸಿಬ್ಬಂದಿ ವಿದ್ಯುತ್ ಮಾರ್ಗದ ತಂತಿಗಳನ್ನು ಸರಿಪಡಿಸಿದರು. ಆ ನಂತರ ರೈಲು ಸೇವೆ ಸಹಜ ಸ್ಥಿತಿಗೆ ಬಂದಿತು.ಈ ಅಡಚಣೆಯಿಂದ ಕೆಲವು ರೈಲುಗಳ ಸಂಚಾರ ವಿಳಂಬವಾಗಿದ್ದರಿಂದ ಕಚೇರಿಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಪರದಾಡುವಂತಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry