ರೈಲು ಸೇವೆ ನೇರ ಸಂಪರ್ಕ: ಅನುಕೂಲ

7

ರೈಲು ಸೇವೆ ನೇರ ಸಂಪರ್ಕ: ಅನುಕೂಲ

Published:
Updated:

ರಾಜ್ಯದ ತುತ್ತತುದಿಯ ಬೀದರ್‌ನಿಂದ ಬೆಂಗಳೂರಿಗೆ ನೇರ ಸಂಪರ್ಕ ಕಲ್ಪಿಸುವ ರೈಲು ಸೇವೆ ಪ್ರಾರಂಭವಾಗಿರುವುದು ನಿಜಕ್ಕೂ ಸಂತಸದ ವಿಷಯ. ಬೀದರ್ ಜಿಲ್ಲೆಯ ಜನತೆಗೆ ಇದರಿಂದ ತುಂಬಾ ಅನುಕೂಲವಾಗಲಿದೆ.ಹಾಗೆಯೇ ಈಗ ವಾರಕ್ಕೆ ಮೂರು ದಿನ ಸಂಚರಿಸುವ ಈ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್ ರೈಲನ್ನು ಮುಂದಿನ ದಿನಗಳಲ್ಲಿ ನಿತ್ಯವೂ ಸಂಚರಿಸುವಂತೆ ಮಾಡಬೇಕು.ಹಾಗೆ ಆದಾಗ ಮಾತ್ರ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿರುವ ಏಕೀಕರಣದ ಕನಸು ನನಸಾಗಿದೆ ಎಂಬ ಮಾತು ಇನ್ನಷ್ಟು ಬಲವಾಗುವುದು.ಈ ರೈಲು ಪ್ರಾರಂಭಗೊಳ್ಳುವಲ್ಲಿ ಶ್ರಮ ವಹಿಸಿದ ಸಂಸದ ಧರ್ಮಸಿಂಗ್ ಮತ್ತು ರೈಲ್ವೆ ಸಚಿವರಿಗೆ ಅಭಿನಂದನೆಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry