ಬುಧವಾರ, ಏಪ್ರಿಲ್ 21, 2021
24 °C

ರೈಲು ಸೌಕರ್ಯ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಖಾಜಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಉತ್ತರ ಕರ್ನಾಟಕ ಭಾಗಕ್ಕೆ ರೈಲ್ವೆ ಸೌಲಭ್ಯ ಒದಗಿಸುವಲ್ಲಿ ಇದುವರೆಗಿನ ಕೇಂದ್ರ ಸರ್ಕಾರಗಳು ವಿಫಲವಾಗಿದ್ದು, ಮಲತಾಯಿ ಧೋರಣೆ ತಾಳುತ್ತಾ ಬಂದಿವೆ ಎಂದು ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದೀನ್ ಖಾಜಿ ಆರೋಪಿಸಿದರು.ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯು ಗದಗ ರೈಲು ನಿಲ್ದಾಣ ಎದುರಿಗೆ ಏರ್ಪಡಿಸಿದ್ದ ನಾಲ್ಕನೇ ವರ್ಷದ `ವಿಜಯ ಸಂಕಲ್ಪ~ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕುಡಚಿ - ಬಾಗಲಕೋಟೆ ರೈಲು ಮಾರ್ಗಕ್ಕೆ 2010 ರ ರೈಲು ಮುಂಗಡ ಪತ್ರದಲ್ಲಿ ಹಸಿರು ನಿಶಾನೆ ತೋರಿದರೂ, ಈವರೆಗೂ ಕಾಮಗಾರಿ ಪ್ರಾರಂಭ ವಾಗದಿರುವುದು ದುರಾದೃಷ್ಟಕರ, ಶೀಘ್ರ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಿ ಭೂಸ್ವಾಧೀನ ಪಡಿಸಿಕೊಂಡು ಕಾಮಗಾರಿಗೆ ಚಾಲನೆ ನೀಡದಿದ್ದರೆ ಮತ್ತೆ ಉಗ್ರ ಹೋರಾಟ ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.ಬ್ರಾಡ್‌ಗೇಜ್ ಸೇವೆ ಪ್ರಾರಂಭವಾಗಿ ನಾಲ್ಕು ವರ್ಷ ಗತಿಸಿದರೂ, ರೈಲ್ವೆ ಸೌಕರ್ಯ ಕುರಿತು ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಮನವರಿಕೆ ಮಾಡಿ ಕೊಡುವುದರಲ್ಲಿ ಉತ್ತರ ಕರ್ನಾಟಕ ಭಾಗದ ಸಂಸದರು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.ಗದಗ -ವಿಜಾಪುರ ಮಾರ್ಗದ ರೈಲು ನಿಲ್ದಾಣಗಳಲ್ಲಿ ಸಮರ್ಪಕ ಮೂಲ ಸೌಕರ್ಯ ಕಲ್ಪಿಸುವುದು, ಪ್ರಯಾಣಿಕರ ಅನುಕೂಲಕರ ಸಮಯದಲ್ಲಿ ಪ್ಯಾಸೆಂಜರ್ ರೈಲುಗಳ ಸೌಕರ್ಯ ಕಲ್ಪಿಸುವುದು ಮತ್ತು ಬಾಗಲಕೋಟೆ, ವಿಜಾಪುರ ಜಿಲ್ಲೆಗಳಿಂದ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವದರಲ್ಲಿ ರೈಲ್ವೆ ಇಲಾಖೆ ವಿಫಲವಾಗಿದೆ ಎಂದು ದೂರಿದರು.ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ರೈಲ್ವೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸುವದಾಗಿ ಹೇಳಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ. ವಿ. ಜಿ. ಪೂಜಾರ, ಬಸವಣ್ಣೆಯ್ಯ ಹಿರೇಮಠ, ವಿಜಯ. ಎಸ್. ಮುಳಗುಂದ, ಎನ್. ಕೆ. ಕೊರಲಳ್ಳಿ, ಮುನ್ನಾ ರೇಶ್ಮಿ, ಹನುಮಂತಪ್ಪ ಕಿನ್ನಾಳ, ರಾಚಪ್ಪ ಗಡಾದ, ಸತೀಶ ರಾಯ ಬಟ್ಟನ್ನವರ, ಮಲ್ಲೇಶ ಶಿಗ್ಲಿ, ನಿಸ್ಸಾರ್ ಅಹ್ಮದ ಖಾಜಿ, ರಮೇಶ ಕಾಳೆ, ಗಿರೀಶ ಪ್ರಾಂಚಸ್, ಮೈನುದ್ದೀನ ಖಾಜಿ  ಉಪಸ್ಥಿತರಿದ್ದರು. ಗದಗ ರೈಲು ನಿಲ್ದಾಣದ ವ್ಯವಸ್ಥಾಪಕ ಆರ್. ಎ. ಶರೀಫ್ ಅವರಿಗೆ ಬೇಡಿಕೆ ಗಳನ್ನೊಳಗೊಂಡ  ಮನವಿಯನ್ನು  ಸಲ್ಲಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.