ರೈಲು ಸೌಲಭ್ಯಕ್ಕೆ ಕರವೇ ಆಗ್ರಹ

5

ರೈಲು ಸೌಲಭ್ಯಕ್ಕೆ ಕರವೇ ಆಗ್ರಹ

Published:
Updated:

ಯಾದಗಿರಿ: ವಾಡಿ-ಗದಗ ರೈಲು ಮಾರ್ಗ ಶೀಘ್ರ ಪ್ರಾರಂಭಿಸುವುದು ಸೇರಿದಂತೆ ರೈಲು ಸೌಲಭ್ಯಗಳನ್ನು ಕಲ್ಪಿ ಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಘಟಕ ಆಗ್ರಹಿಸಿದೆ.ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ವಾಡಿ-ಗದಗ ರೈಲ್ವೆ ಮಾರ್ಗ ಆರಂಭವಾದರೆ ಗುಲ್ಬರ್ಗ, ರಾಯ ಚೂರು, ಕೊಪ್ಪಳ ಜಿಲ್ಲೆಗಳು ಅಭಿವೃದ್ಧಿ ಆಗಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಇದೀಗ ಕಾಲ ಕೂಡಿ ಬಂದಿದ್ದು, ವಾಡಿ-ಗದಗ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದೆ. ಇದಕ್ಕಾಗಿಯೇ ರೂ.1.117 ಕೋಟಿ ವೆಚ್ಚವನ್ನೂ ನಿಗದಿ ಮಾಡಲಾಗಿದೆ. ಬರುವ ರೈಲ್ವೆ ಬಜೆಟ್‌ನಲ್ಲಿ ಈ ವಿಷಯ ವನ್ನು ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ರೈಲ್ವೆ ಮಾರ್ಗವು ಸುರಪುರ- ಶಹಾಪುರ, ರಾಯಚೂರು ಜಿಲ್ಲೆಯ ಗುರುಗುಂಟಾ-ಲಿಂಗಸುಗೂರು- ಮುದಗಲ್ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ-ಕುಕನೂರು-ಯಲಬುರ್ಗ ಮೂಲಕ ಗದಗ ಜಿಲ್ಲೆಯನ್ನು ತಲುಪ ಲಿದೆ.ಇದರಿಂದಾಗಿ ಹೈದರಾಬಾದ ಕರ್ನಾಟಕ ಜಿಲ್ಲೆಗಳ ವಾಣಿಜ್ಯ ವಹಿ ವಾಟಿಗೆ ಅನುಕೂಲವಾಗಲಿದೆ. ಕೂಡಲೇ ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಯೋಜನೆ ಯನ್ನು ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದರು.ಬಹುದಿನಗಳಿಂದ ಯಾದಗಿರಿ ಜಿಲ್ಲೆ ಯಲ್ಲಿ ಗರೀಬ್ ರಥ ರೈಲು ನಿಲುಗಡೆ ಆಗದಿರುವುದು ಖಂಡನೀಯ. ಯಾದ ಗಿರಿ ಜಿಲ್ಲೆಯಾದರೂ ರೈಲ್ವೆ ಇಲಾಖೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗರೀಬ್ ರಥ ರೈಲು ಶ್ರೀಮಂತರ ರಥ ವಾಗಿದೆ. ಕೂಡಲೇ ಈ ರೈಲನ್ನು ಯಾದ ಗಿರಿಯಲ್ಲಿ ನಿಲುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿ ಸಿದರು.ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ವೆಂಕಟೇಶ ಬೋನೇರ, ಶರಣು ಇಟಗಿ, ಬಿ.ಸಿ. ಪಾಟೀಲ, ಲಿಂಗಪ್ಪ ತಾಂಡೂರ ಕರ, ಜಿ.ಪಂ. ಸದಸ್ಯ ಭೀಮರಾಯ, ರವಿ ತಳಬಿಡಿ, ಮಂಜುನಾಥ, ಶರಣ ಗೌಡ, ಫಕೀರಸಾಬ ಮುಂತಾದವರು ಮನವಿ ಸಲ್ಲಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry