ರೈಲ್ವೆಯಿಂದ ಭಾರಿ ಸಾಲದ ಬೇಡಿಕೆ

7

ರೈಲ್ವೆಯಿಂದ ಭಾರಿ ಸಾಲದ ಬೇಡಿಕೆ

Published:
Updated:

ನವದೆಹಲಿ(ಪಿಟಿಐ):  ಹಲವಾರು  ಪ್ರಮುಖ ಯೋಜನೆಗಳು ಮತ್ತು ರಕ್ಷಣಾ ಕಾರ್ಯಗಳನ್ನು  ಪೂರ್ಣಗೊಳಿಸಲು ಹಣದ ಕೊರತೆಯಿದೆ  ಎಂದಿರುವ  ರೈಲ್ವೆ ಸಚಿವಾಲಯವು ಆರ್ಥಿಕ  ಸಚಿವಾಲಯದಿಂದ 2000 ಕೋಟಿ  ರೂಪಾಯಿ ಸಾಲ ನೀಡುವಂತೆ ಬೇಡಿಕೆ ಸಲ್ಲಿಸಿದೆ.ರೈಲ್ವೆ ಕಾಮಗಾರಿಗಳ ಖರ್ಚು 2007-08ರಲ್ಲಿ ರೂ. 41,033 ಕೋಟಿಯಿಂದ 2011-12ರ ಸಾಲಿನಲ್ಲಿ 73,650 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಪಿಂಚಣಿ   ಖರ್ಚು ಸಹ 7,953 ಕೋಟಿಯಿಂದ 16,000 ಕೋಟಿಗೆ ಹೆಚ್ಚಳವಾಗಿದ್ದು, ಆದಾಯದಲ್ಲಿ ತೀವ್ರ ಕುಸಿತವಾಗಿದೆ ಎಂದು ರೈಲ್ವೆ ಸಚಿವಾಲಯವು ತಿಳಿಸಿದೆ.ಈ ಆರ್ಥಿಕ ವರ್ಷದಲ್ಲಿ 99.3 ಕೋಟಿ ಟನ್ ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ಸಾಗಣೆಯನ್ನು ಮಾಡುವ ಗುರಿ ಹೊಂದಿದ್ದು ಹಲವು ಕಾರಣದಿಂದ ಅದು ಅಸಾಧ್ಯ ಎನ್ನಲಾಗಿದೆ. ರೈಲ್ವೆ ಹಣಕಾಸು ಆಯುಕ್ತ ಪಾಮಾ ಬಬ್ಬರ್ ಅವರು ಮುಂದಿನ ವಾರ ಹಣಕಾಸು ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಸಾಲದ ಬಗ್ಗೆ ಅಂತಿಮಗೊಳಿಸಲಿದ್ದಾರೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry