ರೈಲ್ವೆ ಅಧಿಕಾರಿಗಳ ಅವ್ಯವಹಾರ: ಸಿಬಿಐ ತನಿಖೆ

7

ರೈಲ್ವೆ ಅಧಿಕಾರಿಗಳ ಅವ್ಯವಹಾರ: ಸಿಬಿಐ ತನಿಖೆ

Published:
Updated:

ನವದೆಹಲಿ (ಪಿಟಿಐ): ಸಾಮಗ್ರಿಗಳನ್ನು ಖರೀದಿಸುವಾಗ ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿ ಸುಮಾರು 16 ಕೋಟಿ ರೂಪಾಯಿ ಅವ್ಯವಹಾರ ನಡೆಸಿರುವ ರೈಲ್ವೆ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸಲಿದೆ.

ರೈಲ್ವೆ ಆಗ್ನೇಯ ವಿಭಾಗದ ಖರಗ್‌ಪುರ ಕಾರ್ಯಾಗಾರದಲ್ಲಿ ನಡೆದ ಅವ್ಯವಹಾರವನ್ನು ಮೊದಲಿಗೆ ಕೇಂದ್ರ ಜಾಗೃತ ಆಯೋಗ ಪತ್ತೆಹಚ್ಚಿ ಪ್ರಾಥಮಿಕ ವಿಚಾರಣೆ ನಡೆಸಿ ನಂತರ, ಕ್ರಿಮಿನಲ್ ಸಂಚು ಮತ್ತು ಭ್ರಷ್ಟಾಚಾರದ ಬಗ್ಗೆ ಹೆಚ್ಚಿನ ತನಿಖೆ ನಡೆಸುವಂತೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ.

`ಕಾರ್ಯಾಗಾರದಲ್ಲಿ ರೈಲು ಬೋಗಿಗಳ ದುರಸ್ತಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವಾಗ ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿ ಭಾರಿ ಪ್ರಮಾಣದ ಅವ್ಯವಹಾರ ನಡೆಸಿದ ನಾಲ್ವರು ಅಧಿಕಾರಿಗಳಿಗೆ ದೊಡ್ಡ ಮೊತ್ತದ ದಂಡ ವಿಧಿಸುವಂತೆ ಶಿಫಾರಸು ಮಾಡಲಾಗಿದೆ~ ಎಂದು ಕೇಂದ್ರ ಜಾಗೃತ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಖಾಸಗಿ ಸಂಸ್ಥೆಗಳಿಂದ ವಸ್ತುಗಳನ್ನು ಖರೀದಿಸುವಾಗ ಈ ಅಧಿಕಾರಿಗಳು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಲಪಟಾಯಿಸುತ್ತಿದ್ದರು ಎಂದು ಅವರು  ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry