ರೈಲ್ವೆ ಇಲಾಖೆಯ ನಿರ್ಲಕ್ಷ್ಯ

7

ರೈಲ್ವೆ ಇಲಾಖೆಯ ನಿರ್ಲಕ್ಷ್ಯ

Published:
Updated:

ಐತಿಹಾಸಿಕ ನಗರ ಶ್ರೀರಂಗಪಟ್ಟಣ ಪ್ರವಾಸಿಗರ ಮೆಚ್ಚಿನ ತಾಣವೂ ಆಗಿದೆ. ಮೈಸೂರಿಗೆ ಬರುವ ಪ್ರವಾಸಿಗರು ಶ್ರೀರಂಗಪಟ್ಟಣ ನೋಡದಿದ್ದರೆ ಮೈಸೂರು ಪ್ರವಾಸವೇ ಪೂರ್ಣವೆನಿಸುವುದಿಲ್ಲ. ಆದರೆ ಈ ಪ್ರೇಕ್ಷಣೀಯ ಸ್ಥಳ ರೈಲ್ವೆ ಇಲಾಖೆಗೆ ಮಾತ್ರ ಕಾಲಕಸವಾಗಿದೆ.

ಮೈಸೂರು ಬೆಂಗಳೂರಿನ ನಡುವೆ ಓಡಾಡುವ ಪ್ರಮುಖ ರೈಲುಗಳಾದ `ಟಿಪ್ಪು ಎಕ್ಸ್‌ಪ್ರೆಸ್', `ಕಾವೇರಿ ಎಕ್ಸ್‌ಪ್ರೆಸ್', `ಮೈಲಾಡಿತೊರೈ', `ರಾಜ್ಯರಾಣಿ' ಶ್ರೀರಂಗಪಟ್ಟಣದಲ್ಲಿ ನಿಲ್ಲುವುದಿಲ್ಲ.  ಇದರಲ್ಲಿ ಕೆಲವು ರೈಲುಗಳಿಗೆ ಮದ್ದೂರು,

ಚನ್ನಪಟ್ಟಣದಂತಹ ತಾಲ್ಲೂಕು ಕೇಂದ್ರಗಳಲ್ಲಿ ನಿಲುಗಡೆ ಇದೆ. ತಾಲ್ಲೂಕು ಕೇಂದ್ರವೂ, ಐತಿಹಾಸಿಕ ಪಟ್ಟಣವೂ ಆದ ಶ್ರೀರಂಗಪಟ್ಟಣದಲ್ಲಿ ಮಾತ್ರ ನಿಲುಗಡೆ ಇಲ್ಲದಿರುವುದು ವಿಪರ್ಯಾಸ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry