ಶನಿವಾರ, ಜೂನ್ 19, 2021
27 °C
ಹೋಬಳಿಮಟ್ಟದ ಜೆಡಿಎಸ್‌ ಸಮಾವೇಶ

ರೈಲ್ವೆ ಕೋಚ್‌ ಕಾರ್ಖಾನೆ ಕೇವಲ ಗಿಮಿಕ್‌: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಲೋಕಸಭಾ ಚುನಾವಣೆ ಪ್ರಚಾರದ ಅಂಗವಾಗಿ ಜೆಡಿಎಸ್‌ ಪಕ್ಷದ ವತಿಯಿಂದ ಶುಕ್ರವಾರ ತಾಲ್ಲೂಕಿನ ಬಟ್ಲಹಳ್ಳಿ, ಮುರು­ಗ­ಮಲ್ಲ ಮತ್ತು ಮಾಡಿಕೆರೆ ಕ್ರಾಸ್‌ನಲ್ಲಿ ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶ­ಗಳು ನಡೆದವು.ಕೋಲಾರ ಲೋಕಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಕೇಶವ, ರೈಲ್ವೆ ಕೋಚ್‌  ಕಾರ್ಖಾನೆ ಕೇವಲ ಚುನಾ­ವಣೆ ಗಿಮಿಕ್‌ ಆಗಿದೆ ಎಂದು ಆರೋಪಿಸಿದರು.ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ಕೆ.ಎಚ್‌.ಮುನಿಯಪ್ಪ  ಕಳೆದ  ಎರಡು ದಶಕಗಳಿಂದಲೂ ಶಾಶ್ವತ ನೀರಾವರಿ ಬಗ್ಗೆ ಕೇವಲ ಭಾಷಣ ಮತ್ತು ಆಶ್ವಾ­ಸನೆ ನೀಡುವುದರಲ್ಲೆ ಕಾಲ ಕಳೆದರು ಎಂದು ಟೀಕಿಸಿದರು.ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಯಾವ ಕಾರಣಕ್ಕಾಗಿ ಕಾಂಗ್ರೆಸ್‌ ಅಭ್ಯ­ರ್ಥಿಗೆ  ಮತ ಹಾಕಬೇಕು ಎಂಬುದನ್ನು ಯೋಚಿಸಿ ಮತ ಚಲಾಯಿಸಿ ಎಂದರು.ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಶಿವಾರೆಡ್ಡಿ, ಮಾಲೂರು ಶಾಸಕ ಮಂಜುನಾಥಗೌಡ, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಟಿ.ಎನ್.­ರಾಜ­ಗೋಪಾಲ್‌, ಉಪಾಧ್ಯಕ್ಷ ಬೈರಾರೆಡ್ಡಿ, ಕುರುಬೂರು ರವೀಂದ್ರಗೌಡ, ತಾ.ಪಂ. ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ರಘುನಾಥರೆಡ್ಡಿ, ದೊಡ್ಡಬೊಮ್ಮನಹಳ್ಳಿ ವೆಂಕಟರೆಡ್ಡಿ, ಆರ್‌.ನಾರಾಯಣ­ಸ್ವಾಮಿ ಸನಾವುಲ್ಲಾ, ಪೆದ್ದೂರು ನಾಗರಾಜ­ರೆಡ್ಡಿ, ಚಂದ್ರಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.