ಸೋಮವಾರ, ಜೂನ್ 21, 2021
30 °C

ರೈಲ್ವೆ: ಜಿಲ್ಲೆಗೆ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಗೆ ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಕೆಲ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಬಹುನಿರೀಕ್ಷಿತ ಬೆಂಗಳೂರು- ತಾಳಗುಪ್ಪಕ್ಕೆ ಹೊಸ ಎಕ್ಸ್‌ಪ್ರೆಸ್ ರೈಲಿನ ಬದಲಾಗಿ, ಬೆಂಗಳೂರು-ಶಿವಮೊಗ್ಗ ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ.ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರಿಗೆ ಹೊಸ ರೈಲು ಮಾರ್ಗ ಸಮೀಕ್ಷೆ  ಘೋಷಿಸಲಾಗಿದೆ. ಹಾಗೆಯೇ, ಶಿವಮೊಗ್ಗ-ಹರಿಹರ ಮಾರ್ಗಕ್ಕೆ ರಾಜ್ಯ ಸರ್ಕಾರದ ಸಹಭಾಗಿತ್ವ ಯೋಜನೆಯಡಿಯಲ್ಲಿ ಹಣ ಒದಗಿಸಲಾಗಿದೆ.

ಅಭಿನಂದನೆ:  ಜಿಲ್ಲೆಗೆ ಈ ಯೋಜನೆಗಳನ್ನು ಘೋಷಣೆ ಮಾಡಿದ್ದಕ್ಕೆ ಕೇಂದ್ರ ರೈಲ್ವೆ ಮಂತ್ರಿ ದಿನೇಶ್ ತ್ರಿವೇದಿ, ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಹಾಗೂ ರಾಜ್ಯ ಸರ್ಕಾರಕ್ಕೆ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ, ಸಾಗರ ರೈಲ್ವೆ ಹೋರಾಟ ಸಮಿತಿ ಹಾಗೂ ಕೆಳದಿ ಮಠದ ಸ್ವಾಮೀಜಿ ಅವರು ಧನ್ಯವಾದ ಹೇಳಿದ್ದಾರೆ.ಅನುಕೂಲ: ಉದ್ದೇಶಿತ ಶಿವಮೊಗ್ಗ-ಹರಿಹರ ಮಾರ್ಗ ಬಹಳ ವರ್ಷಗಳ ಕನಸು. ಅದಕ್ಕೆ ಹಣ ಒದಗಿಸಿರುವುದು ಉತ್ತಮ ಅಂಶ. ಅಲ್ಲದೇ, ಶಿರಸಿ-ಹಾವೇರಿಗೆ ಹೊಸ ರೈಲ್ವೆ ಮಾರ್ಗ ಮಾಡಿರುವುದು ಜಿಲ್ಲೆಗೆ ಅನುಕೂಲವಾಗಲಿದೆ ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಭಾರದ್ವಜ್ ಪ್ರತಿಕ್ರಿಯೆ ವ್ಯಕ್ತಪಡಿಸಿದರು.ಶಿವಮೊಗ್ಗ-ಹರಿಹರ ಆಗಲಿ:  ಬೆಂಗಳೂರು-ತಾಳಗುಪ್ಪಕ್ಕೆ ಹೊಸ ಏಕ್ಸ್‌ಪ್ರೆಸ್ ರೈಲು ಬೇಕಿತ್ತು. ಅಲ್ಲದೇ, ಶಿವಮೊಗ್ಗ- ಶಿಕಾರಿಪುರ- ರಾಣೆಬೆನ್ನೂರು ಮಾರ್ಗಕ್ಕಿಂತ ಮೊದಲು ಶಿವಮೊಗ್ಗ-ಹರಿಹರ ಮಾರ್ಗ ಆಗಬೇಕು. ಈ ಯೋಜನೆಗೆ ತಡೆಯಾಗಿರುವ ರೈತರ ಮನವೊಲಿಸುವ ಕೆಲಸವನ್ನು ಸಂಸತ್ ಸದಸ್ಯರು ಮಾಡಬೇಕು. ಶಿವಮೊಗ್ಗ- ಹರಿಹರ ಮಾರ್ಗವಾದರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಸಲಹಾ ಮಂಡಳಿ ಮಾಜಿ ಸದಸ್ಯ ಸನಾವುಲ್ಲ ಪ್ರತಿಕ್ರಿಯೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.