ಸೋಮವಾರ, ಮೇ 17, 2021
28 °C

ರೈಲ್ವೆ: ಟೋಕನ್ ವ್ಯವಸ್ಥೆ ಅಳವಡಿಸಲಿ

ಡಾ. ಚೆನ್ನು ಅ. ಹಿರೇಮಠ, ರಾಣೀಬೆನ್ನೂರು Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಲ್ಲಿ ಅತಿ ಹೆಚ್ಚು ಜನಸಂದಣಿ ಕಂಡುಬರುತ್ತದೆ. ಇಲ್ಲಿನ ನಿಲ್ದಾಣದಲ್ಲಿ ಮುಂಗಡ ಸೀಟು ಕಾಯ್ದಿರಿಸಲು ಇರುವ ಸ್ಥಳದಲ್ಲಿ ಇದುವರೆಗೂ ಸರದಿ ವ್ಯವಸ್ಥೆಗೆ ಅನುಕೂಲವಾಗುವ ವಿದ್ಯುನ್ಮಾನ ಟೋಕನ್ ಪದ್ಧತಿಯನ್ನು ಅಳವಡಿಸಲಾಗಿಲ್ಲ.  ಶಿವಮೊಗ್ಗದಂತಹ ಊರಿಗೆ ಈ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿರುವ ರೈಲ್ವೆ ಇಲಾಖೆಗೆ ಬೆಂಗಳೂರಿನಂತಹ ಜನನಿಬಿಡ, ಲಕ್ಷಾಂತರ ಜನ ಬಂದುಹೋಗುವ ದೊಡ್ಡ ರೈಲು ನಿಲ್ದಾಣದಲ್ಲಿ ಹೆಚ್ಚಿನ ಬಂಡವಾಳ, ತಾಂತ್ರಿಕತೆಯನ್ನೂ ಬೇಡದ ಈ ಸೌಕರ‌್ಯ ಕಲ್ಪಿಸಲು ಏನು ತೊಂದರೆ ತಿಳಿಯುತ್ತಿಲ್ಲ.ಶೀಘ್ರವಾಗಿ ಈ ವ್ಯವಸ್ಥೆ ಕಲ್ಪಿಸಿದಲ್ಲಿ ಪ್ರಯಾಣಿಕರ ನಡುವೆ ಅನವಶ್ಯಕವಾಗಿ ನಡೆಯುವ ವಾಗ್ಯುದ್ಧಕ್ಕೆ ಇತಿಶ್ರೀ ಹಾಡಬಹುದು. ಈ ನಿಟ್ಟಿನಲ್ಲಿ ಇಲಾಖೆಯವರು ಕ್ರಮ ಕೈಗೊಂಡು ಜನರಿಗೆ ಉಪಕರಿಸಲಿ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.