ರೈಲ್ವೆ ನೌಕರರಿಗೆ ವಿಶೇಷ ಯೋಜನೆ

7

ರೈಲ್ವೆ ನೌಕರರಿಗೆ ವಿಶೇಷ ಯೋಜನೆ

Published:
Updated:

ಹುಬ್ಬಳ್ಳಿ: ರೈಲ್ವೆ ನೌಕರರಿಗಾಗಿ ನಗರದ ಎಸ್‌ಬಿಐನ ಮುಖ್ಯ ಕಚೇರಿ ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದು ಈಚೆಗೆ ನಡೆದ ಸಮಾರಂಭದಲ್ಲಿ ನೈರುತ್ಯ ರೈಲ್ವೆಯ ಮುಖ್ಯ ಸಿಬ್ಬಂದಿ ಅಧಿಕಾರಿ ಅಮಿತ್ ಕುಮಾರ್ ಬ್ರಹ್ಮೋ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈಲ್ವೆ ಹಾಗೂ ಎಸ್‌ಬಿಐ, ದೇಶದಲ್ಲಿ ಅತ್ಯಧಿಕ ನೌಕರರನ್ನು ಹೊಂದಿರುವ ಸಂಸ್ಥೆಗಳಾಗಿದ್ದು ಇವೆರಡೂ ಕೈಜೋಡಿಸಿ ಜಾರಿಗೆ ತಂದಿರುವ ಈ ಯೋಜನೆಯಿಂದ ರೈಲ್ವೆ ನೌಕರರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

 

ಎಸ್‌ಬಿಐ ಆಡಳಿತ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಬಿ. ವೇಣುಗೋಪಾಲ ರೆಡ್ಡಿ, ಎಸ್‌ಬಿಐ ಮೂಲಕ ವೇತನ ಪಡೆದುಕೊಳ್ಳುವ ರೈಲ್ವೆ ನೌಕರರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳ ಬಹುದಾಗಿದೆ ಎಂದು ತಿಳಿಸಿದರು.ಗೃಹ ಸಾಲ, ಕಾರು ಸಾಲ ಹಾಗೂ ವೈಯಕ್ತಿಕ ಸಾಲದ ಬಡ್ಡಿಯಲ್ಲಿ ಕಡಿತ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಈ ಯೋಜನೆ ಹೊಂದಿದೆ ಎಂದು ಅವರು ಹೇಳಿದರು. ಎಸ್‌ಬಿಐಯ ಐ.ಎಂ.ರಮೇಶ, ವಿದ್ಯಾನಾಥನ್ ಮತ್ತಿತರರು  ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry