ಸೋಮವಾರ, ಜೂನ್ 21, 2021
30 °C

ರೈಲ್ವೆ ಬಜೆಟ್: ಉ.ಕ. ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಪ್ರಸಕ್ತ ಸಾಲಿನ ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಆದ್ಯತೆ ದೊರೆತಿಲ್ಲ, ಈ ಭಾಗದ ಪ್ರಮುಖ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪವೇ ಇಲ್ಲ ಎಂದು ಸಂಸದ ಶಿವರಾಮಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.ಬಹು ನಿರೀಕ್ಷಿತ ಗದಗ- ವಾಡಿ, ಕೊಪ್ಪಳ-ಆಲಮಟ್ಟಿ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ. ಈ ಹಿಂದೆ ಪ್ರಕಟಿಸಿದಂತೆ ನಗರ ರೈಲು ನಿಲ್ದಾಣಕ್ಕೆ `ಆದರ್ಶ ನಿಲ್ದಾಣ~ ಸ್ಥಾನಮಾನದ ಬಗ್ಗೆ ಅಧಿಕೃತ ಘೋಷಣೆ ಇಲ್ಲ. ಮುನಿರಾಬಾದ್-ಮೆಹಬೂಬ್ ನಗರ ರೈಲು ಮಾರ್ಗ ಯೋಜನೆಯ ತುರ್ತು ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ದೊರೆತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.ಈ ಭಾಗದ ಜನಪ್ರತಿನಿಧಿಗಳು ಬೇಡಿಕೆ ಸಲ್ಲಿಸಿದಂತೆ ಯಾವುದೇ ಹೊಸ ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳ ಮಂಜೂರಾತಿ ನೀಡದೆ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮಧ್ಯಮ ಮತ್ತು ಬಡವರಿಗೆ ಅನುಕೂಲವಿದ್ದ ಸಾಮಾನ್ಯ ಪ್ರಯಾಣ ದರವನ್ನು ಏರಿಸಿರುವುದು ದುರದೃಷ್ಟಕರ.  ಆದರೆ ತಮ್ಮ ಬೇಡಿಕೆಯಂತೆ ಕೊಲ್ಲಾಪುರ-ಹೈದರಾಬಾದ್ ರೈಲನ್ನು ವಾರ ಪೂರ್ತಿ ಓಡಿಸಲು ಹಾಗೂ ಶಿರಡಿ-ಮೈಸೂರು ರೈಲನ್ನು ಖಾಯಂ ಆಗಿ ವಾರಕ್ಕೊಮ್ಮೆ ಓಡಿಸಲು ತೆಗೆದುಕೊಂಡ ನಿರ್ಣಯ ಮತ್ತು ಹೊಸಪೇಟೆ- ಹುಬ್ಬಳ್ಳಿ ಮಧ್ಯೆ ವಿದ್ಯುತ್ ಚಾಲಿತ ರೈಲಿನ ಓಡಾಟವನ್ನು ಪ್ರಸ್ತಾಪ ಮಾಡಿರುವುದು ಸ್ವಾಗತಾರ್ಹ ಎಂದು ಅಭಿಪ್ರಾಯಪಟ್ಟಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.