ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

7

ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

Published:
Updated:
ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

ಯಲಹಂಕ: ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ರೂ 30 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅಲ್ಲಾ­ಳಸಂದ್ರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್‌.ಆರ್‌.­ವಿಶ್ವನಾಥ್‌ ಗುದ್ದಲಿಪೂಜೆ ನೆರವೇ­ರಿಸಿದರು.ನಂತರ ಮಾತನಾಡಿದ ಅವರು, ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ  ಅಲ್ಲಾಳಸಂದ್ರ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಬಿಬಿಎಂಪಿಯಿಂದ ರೂ 18 ಕೋಟಿ ಹಾಗೂ ರೈಲ್ವೆ ಇಲಾಖೆ­ಯಿಂದ ರೂ 12 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಒಂದು ವರ್ಷ­ದಲ್ಲಿ ಪೂರ್ಣಗೊ­ಳಿಸಲಾಗುವುದು ಎಂದು ಹೇಳಿದರು.ಈ ರಸ್ತೆಯು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದ್ದು, ಇಲ್ಲಿ ರೈಲು ಓಡಾಟ ಹೆಚ್ಚಿರುವ ಕಾರಣ  ರೈಲ್ವೆಗೇಟ್‌ ಹಾಕಿದಾಗ ವಾಹನ ಸವಾರರು ಸರಿ­ಯಾದ ಸಮಯಕ್ಕೆ ತಮ್ಮ ಪ್ರದೇಶಗಳಿಗೆ ತಲುಪಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಮೇಲ್ಸೇತುವೆ ನಿರ್ಮಿಸುವುದರಿಂದ ದೊಡ್ಡಬಳ್ಳಾಪುರ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸವಾ­ರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.ಬಿಬಿಎಂಪಿ ಸದಸ್ಯ ಮುನಿರಾಜು, ನೈರುತ್ಯರೈಲ್ವೆ ವಲಯದ ಉಪ ಮುಖ್ಯ ಎಂಜಿನಿಯರ್‌ ವಿ.ಹರಿಬಾಬು, ಕಾರ್ಯ­ಪಾಲಕ ಎಂಜಿನಿಯರ್‌ ಸೆಲ್ವಂ, ಬಿಜೆಪಿ ಮುಖಂಡರಾದ ರಮೇಶ್‌, ಸತೀಶ್‌, ಸೋಮಶೇಖರ್‌ ಮೊದ­ಲಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry