ರೈಲ್ವೆ ವಲಯ: ಸಮಿತಿ ರಚನೆ

ಗುರುವಾರ , ಜೂಲೈ 18, 2019
22 °C

ರೈಲ್ವೆ ವಲಯ: ಸಮಿತಿ ರಚನೆ

Published:
Updated:

ನವದೆಹಲಿ (ಪಿಟಿಐ): ಹೆಚ್ಚುವರಿ ರೈಲ್ವೆ ವಲಯ ಮತ್ತು ವಿಭಾಗಗಳ ರಚನೆಗೆ ಕೋರಿ ಸಲ್ಲಿಸಲಾಗಿರುವ ಪ್ರಸ್ತಾವನೆಗಳ ಪರಿಶೀಲನೆಗೆ ರೈಲ್ವೆ ಇಲಾಖೆಯು ದಶಕದ ನಂತರ ಆರು ಜನ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ. 2009ರಿಂದ ಈಚೆಗೆ ವಿವಿಧ ರಾಜ್ಯಗಳು, ಸಂಸದರು ಹಾಗೂ ಶಾಸಕರು ಸಲ್ಲಿಸಿರುವ ಸುಮಾರು 30 ಪ್ರಸ್ತಾವನೆಗಳನ್ನು ನೂತನ ಸಮಿತಿ ಪರಿಶೀಲಿಸಲಿದೆ. ಅಲ್ಲದೆ, ಪ್ರಸ್ತಾವನೆಗಳಿಗೆ ಅನುಗುಣವಾಗಿ ವಲಯ ಮತ್ತು ವಿಭಾಗ ರಚನೆಯ ಕಾರ್ಯಸಾಧ್ಯತೆ, ಹಣಕಾಸು ಜಾರಿ, ಆಡಳಿತಾತ್ಮಕ ಸಮಸ್ಯೆಗಳು ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಅಧ್ಯಯನ ನಡೆಸಲಿರುವ ಸಮಿತಿಯು, ಮುಂದಿನ ಆರು ತಿಂಗಳಲ್ಲಿ ತನ್ನ ವರದಿ ಸಲ್ಲಿಸಲಿದೆ. ಸದ್ಯ ದೇಶದಲ್ಲಿ 17 ರೈಲ್ವೆ ವಲಯಗಳಿವೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry