ಬುಧವಾರ, ಮೇ 18, 2022
25 °C

ರೈಲ್ವೆ ಸರಕು ಸಾಗಾಣಿಕೆ ತುಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹೆಚ್ಚು ವರಮಾನ ಸಂಗ್ರಹಿಸುವ ಉದ್ದೇಶದಿಂದ ರೈಲ್ವೆ, ಎಲ್ಲ ಬಗೆಯ ಸರಕುಗಳ ಸಾಗಣೆ ದರವನ್ನು ಶೇ 6ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಹೊಸ ದರ ಶನಿವಾರದಿಂದಲೇ  ಜಾರಿಗೆ ಬರಲಿವೆ.ಮಾರುಕಟ್ಟೆಯಲ್ಲಿ ವಿವಿಧ ಸರಕುಗಳ ಬೆಲೆಗಳು ದುಬಾರಿಯಾಗಿರುವಾಗ ಮತ್ತು ವಾರ್ಷಿಕ ಹಣದುಬ್ಬರ ಎರಡಂಕಿ ಹತ್ತಿರ ಇರುವಾಗ ಸರಕು ಸಾಗಣೆ ದರ ಹೆಚ್ಚಳಕ್ಕೆ ರೈಲ್ವೆ ನಿರ್ಧರಿಸಿದೆ.ಈ ನಿರ್ಧಾರದಿಂದ ಅವಶ್ಯಕ ಸರಕುಗಳ ಬೆಲೆ ಏರಿಕೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ ಎಂದು ಕೈಗಾರಿಕಾ ವಲಯ ಆತಂಕ ವ್ಯಕ್ತಪಡಿಸಿದೆ.ಕಳೆದ ಮೂರು ವರ್ಷಗಳಲ್ಲಿ ಉಕ್ಕು, ಇಂಧನ, ವಿದ್ಯುತ್ ದರಗಳು ಹೆಚ್ಚಿರುವುದರಿಂದ ಸರಕು ಸಾಗಣೆ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ರೈಲ್ವೆ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ರೈಲ್ವೆ, ಹಣಕಾಸ ಇಲಾಖೆಯಿಂದ 2100 ಕೋಟಿಗಳ ಸಾಲದ ನೆರವಿಗೂ ಮನವಿ ಮಾಡಿಕೊಂಡಿದೆ.ಸರಕು ಸಾಗಣೆಯ ದಟ್ಟಣೆ ಅವಧಿಯ ಶುಲ್ಕವನ್ನು ಸದ್ಯದ ಶೇ 7ರಿಂದ ಶೇ 10ಕ್ಕೆ ಮತ್ತು ಅಭಿವೃದ್ಧಿ ಶುಲ್ಕವನ್ನು ಶೇ 2ರಿಂದ ಶೇ 5ಕ್ಕೆ ಏರಿಸಲೂ ನಿರ್ಧರಿಸಲಾಗಿದೆ.

 

ಈ `ದಟ್ಟಣೆ ಅವಧಿ~ಯ ಶುಲ್ಕವು 2012ರ  ಜೂನ್‌ವರೆಗೆ ಜಾರಿಯಲ್ಲಿ ಇರಲಿದೆ ಎಂದು ರೈಲ್ವೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. `ದಟ್ಟಣೆರಹಿತ ಅವಧಿ~ಯು ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.